ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ.
ಇನ್ನು ಕೆಲ ಹುಡುಗಿಯರಿಗೆ ಸುಂದರವಾಗಿ ಕಾಣ್ಬೇಕು ಎಂಬ ಆಸೆ ಇರುತ್ತದೆ. ಆದ್ರೆ ಕಷ್ಟ ಪಡಲಾರರು. ಅವರು ಚಿಂತಿಸಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆರಾಮಾಗಿ ಕಾಂತಿಯುತ ತ್ವಚೆ ಪಡೆಯಬಹುದು. ಇದು ಜೋಕ್ ಅಲ್ಲ. ನಾವು ಹೇಳುವ ಕ್ರಮವನ್ನು ಅನುಸರಿಸಿದ್ರೆ ಹಾರ್ಡ್ ವರ್ಕ್ ಇಲ್ಲದೆ ನೀವು ಸುಂದರವಾಗಿ ಕಾಣಬಹುದು.
ಎಷ್ಟು ಸಾಧ್ಯವೂ ಅಷ್ಟು ನೀರನ್ನು ನೀವು ಕುಡಿಯಬೇಕು. ಹೌದು, ಸುಂದರವಾಗಿ ಕಾಣಲು ಇದೊಂದು ವಿಧಾನ. ನೀರು, ಚರ್ಮದಲ್ಲಿ ತೇವಾಂಶವನ್ನು ಉಳಿಸುತ್ತದೆ. ಚರ್ಮ ಕೋಮಲವಾಗುವುದಲ್ಲದೇ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.
ಹೊರಗಿನಿಂದ ಮನೆಗೆ ಬಂದ ಪ್ರತಿ ಬಾರಿಯೂ ಮುಖ ತೊಳೆಯಿರಿ. ಪ್ರತಿ ಬಾರಿ ಕ್ರೀಂನಿಂದಲೇ ಮುಖ ತೊಳೆಯಬೇಕೆಂದೇನೂ ಇಲ್ಲ. ತಣ್ಣನೆಯ ನೀರಿನಿಂದ ಮುಖ ತೊಳೆದರೆ ಸಾಕು.
ಮೇಕಪ್ ಹಾಕಿಕೊಂಡಿದ್ದರೆ, ಅದನ್ನು ತೆಗೆದು ಮಲಗಿರಿ. ತುಂಬ ಸಮಯ ಮೇಕಪ್ ನಲ್ಲಿರುವುದು ಒಳ್ಳೆಯದಲ್ಲ. ಅದು ನಿಮ್ಮ ಚರ್ಮದ ಕಾಂತಿಯನ್ನು ಕುಗ್ಗಿಸುತ್ತದೆ.
ಸುಂದರ ಚರ್ಮ ಪಡೆಯಲು ಸುಖ ನಿದ್ರೆಯ ಅವಶ್ಯಕತೆ ಇದೆ. ನಿದ್ದೆ ಮಾಡಿ ಎದ್ದರೆ ನಮ್ಮ ದೇಹ ರೀ ಚಾರ್ಜ್ ಆಗುತ್ತೆ.
ಮಧ್ಯಾಹ್ನದ ಬಿಸಿಲಿಗೆ ಹೋಗುವ ಮುನ್ನ ಚರ್ಮದ ರಕ್ಷಣೆ ಮಾಡಿಕೊಳ್ಳಿ.
ನೀವು ಸೇವಿಸುವ ಆಹಾರದ ಬಗ್ಗೆ ಎಚ್ಚರವಿರಲಿ. ತಾಜಾ ಹಾಗೂ ಪೌಷ್ಟಿಕ ಆಹಾರವನ್ನು ನೀವು ಸೇವಿಸಿ.