ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ದೇವರಿಗಾಗಿ ಪ್ರತ್ಯೇಕ ಕೋಣೆಯನ್ನು ಮೀಸಲಿಡುತ್ತಾರೆ. ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆ ನಡೆಯುತ್ತದೆ. ಆದ್ರೆ ದೇವರ ಪೂಜೆ ವೇಳೆ ಮತ್ತು ದೇವರ ಸ್ಥಾಪನೆ ವೇಳೆ ಮಾಡುವ ತಪ್ಪುಗಳಿಂದ ಮಾಡಿದ ಪೂಜೆ ವ್ಯರ್ಥವಾಗುತ್ತದೆ.
ದೇವರ ಮೂರ್ತಿ ಸ್ಥಾಪನೆ ವೇಳೆ ಮಹತ್ವದ ವಿಷ್ಯವನ್ನು ತಿಳಿಯಬೇಕಾಗುತ್ತದೆ. ಮುರಿದ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಇದು ಮನೆಯ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರ ಪೂಜೆ ಮಾಡುವಾಗ ವಿಗ್ರವನ್ನು ನೋಡಿ ಭಕ್ತರು ಧ್ಯಾನ ಮಾಡ್ತಾರೆ, ಆದ್ರೆ ವಿಗ್ರಹ ಛಿದ್ರವಾಗಿದ್ದರೆ ಧ್ಯಾನ ಮಾಡಲು ಸಾಧ್ಯವಿಲ್ಲ. ಇದ್ರಿಂದ ಮನಸ್ಸಿಗೆ ಶಾಂತಿ ಸಿಗುವುದಿಲ್ಲ.
ಮುರಿದ ವಿಗ್ರಹಗಳಿಂದಾಗಿ ಮನೆಯಲ್ಲಿ ಸಾಕಷ್ಟು ನಕಾರಾತ್ಮಕತೆಯುಂಟಾಗುತ್ತದೆ. ಮುರಿದ ವಿಗ್ರಹದಿಂದಾಗಿ ಏಕಾಗ್ರತೆ ಸಾಧ್ಯವಿಲ್ಲ. ಮನಸ್ಸು ಚಂಚಲವಾಗಿರುತ್ತದೆ. ವಿಗ್ರಹದ ಮುರಿದ ಭಾಗ ಕಣ್ಣಿಗೆ ಬಿದ್ದ ತಕ್ಷಣ ಮನಸ್ಸು ಚಂಚಲಗೊಳ್ಳುತ್ತದೆ. ಪೂಜೆಯಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆರಾಧನೆ ಅಪೂರ್ಣವಾಗಿ ಉಳಿಯುತ್ತದೆ.