4/5 ರಾತ್ರಿ ಮಿಕ್ಕ ಚಪಾತಿ, 1 ಈರುಳ್ಳಿ, 1 ಟೊಮೊಟೊ, 1 ಸಣ್ಣ ಕ್ಯಾರೆಟ್, ಅರ್ಧ ಬೆಂದ ಅವರೆಕಾಳು, (ನಿಮಗೆ ಇಷ್ಟವಾಗುವ ಇನ್ನೂ ಕೆಲ ತರಕಾರಿಗಳನ್ನು ಬಳಸಬಹುದು), ಮೆಣಸು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಚಿಲ್ಲಿ ಟೊಮೊಟೊ ಸಾಸ್. ಎಣ್ಣೆ ಸ್ವಲ್ಪ
ಚಪಾತಿ ಪಾಸ್ತಾ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ, ಬಿಸಿ ಎಣ್ಣೆಗೆ ಹಾಕಿ. ನಂತರ ಟೊಮೊಟೋ ಹಾಕಿ. ಈ ಮಿಶ್ರಣಕ್ಕೆ ಅರ್ಧ ಬೆಂದಿರುವ ಅವರೆಕಾಳು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಕಟ್ ಮಾಡಿದ ಕ್ಯಾರೆಟ್, ಬೆಳ್ಳುಳ್ಳಿ, ಶುಂಠಿ, ಮೆಣಸನ್ನು ಹಾಕಿ ಮಿಕ್ಸ್ ಮಾಡಿ.
ನಂತ್ರ ಚಪಾತಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಪಾಸ್ತಾ ತರಹ ಕಟ್ ಮಾಡಿಕೊಳ್ಳಿ. ಅದನ್ನು ಮಿಶ್ರಣಕ್ಕೆ ಬೆರೆಸಿ. ಇದಕ್ಕೆ ಚಿಲ್ಲಿ ಟೊಮೊಟೊ ಸಾಸ್ ಹಾಕಿ, ಸರ್ವ್ ಮಾಡಿ.