1 ಕಪ್ ಕಡಲೆಬೇಳೆ, ½ ಕಪ್-ತೆಂಗಿನಕಾಯಿ ತುರಿ, 1 ¼ ಕಪ್ –ಬೆಲ್ಲ, 1 ½ ಟೇಬಲ್ ಸ್ಪೂನ್-ಗಸಗಸೆ, 2 ಟೇಬಲ್ ದ್ರಾಕ್ಷಿ, 2 ಟೇಬಲ್ ಸ್ಪೂನ್-ಬಾದಾಮಿ ಚೂರುಗಳು, ಗೋಡಂಬಿ-8, ಏಲಕ್ಕಿ-1/4 ಟೀ ಸ್ಪೂನ್, 2 ಕಪ್ ನೀರು. 4 ಟೇಬಲ್ ಸ್ಪೂನ್-ತುಪ್ಪ.
ಮಾಡುವ ವಿಧಾನ:
ಮೊದಲಿಗೆ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು 2 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ 5 ವಿಷಲ್ ಕೂಗಿಸಿಕೊಳ್ಳಿ. ಇದು ಚೆನ್ನಾಗಿ ಬೇಯಬೇಕು. ಬೆಂದ ಕಡಲೆಬೇಳೆಯ ನೀರು ಶೋಧಿಸಿಕೊಳ್ಳಬೇಕು. ನಂತರ ಕಡಲೆಬೇಳೆಯನ್ನು ಒಂದು ಸೌಟಿನ ಸಹಾಯದಿಂದ ಮೆತ್ತಗೆ ಮಾಡಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಗಸಗಸೆ ಹಾಕಿ ಅದು ಚಟಪಟ ಅನ್ನುವವರೆಗೆ ಹುರಿದುಕೊಳ್ಳಿ. ನಂತರ ಅದೇ ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ಬಾದಾಮಿ, ದ್ರಾಕ್ಷಿಯನ್ನು ಹುರಿದುಕೊಳ್ಳಿ. ನಂತರ ಒಂದು ಬಾಣಲೆಗೆ ಬೆಲ್ಲ ಹಾಕಿ ಅದಕ್ಕೆ ಎರಡು ಚಮಚ ನೀರು ಹಾಕಿ ಕರಗಿಸಿಕೊಳ್ಳಿ.
ಬೆಲ್ಲದಲ್ಲಿ ಕಸವಿದ್ದರೆ ಅದನ್ನು ಶೋಧಿಸಿಕೊಳ್ಳಿ. ನಂತರ ಈ ಬೆಲ್ಲದ ಪಾಕವನ್ನು ಗ್ಯಾಸ್ ಮೇಲೆ ಇಟ್ಟು ಕುದಿಸಿಕೊಳ್ಳಿ. ಅದಕ್ಕೆ ಕಾಯಿ ತುರಿ, ಕಡಲೆಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ 1 ಚಮಚ ತುಪ್ಪ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ.
ನಂತರ ಉಳಿದ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದು ತುಂಬಾ ಗಟ್ಟಿಯಾಗುವುದು ಬೇಡ. ನಂತರ ಇದಕ್ಕೆ ಗಸಗಸೆ, ಹುರಿದಿಟ್ಟುಕೊಂಡ ಡ್ರೈ ಫ್ರೂಟ್ಸ್ , ಏಲಕ್ಕಿ ಪುಡಿ ಸೇರಿಸಿದರೆ ರುಚಿಕರವಾದ ಹಯಗ್ರೀವ ಸವಿಯಲು ಸಿದ್ಧ.