ಪೈನಾಪಲ್ – 4 ಕಪ್ (ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ), ಸಕ್ಕರೆ – 2 ಕಪ್, ಹಳದಿ ಬಣ್ಣದ ಫುಡ್ ಕಲರ್, ಲಿಂಬೆ ಹಣ್ಣಿನ ರಸ – 2 ಟೇಬಲ್ ಸ್ಪೂನ್, ಪೈನಾಪಲ್ ಎಸೆನ್ಸ್ – 1 ಟೀ ಸ್ಪೂನ್.
ಮಾಡುವ ವಿಧಾನ:
ಪೈನಾಪಲ್ ನ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಇದನ್ನು ಹಾಕಿ ಅದಕ್ಕೆ ಸಕ್ಕರೆ ಸೇರಿಸಿ ಗ್ಯಾಸ್ ಮೇಲೆ ಇಡಿ. 15 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿಕೊಳ್ಳಿ, ಸಕ್ಕರೆ ಕರಗಿದ ನಂತರ ಮಿಶ್ರಣ ದಪ್ಪಗಾಗುವುದಕ್ಕೆ ಶುರುವಾಗುತ್ತದೆ. ಆಗ ಇದಕ್ಕೆ ಫುಡ್ ಕಲರ್ ಹಾಕಿ ಗ್ಯಾಸ್ ಆಫ್ ಮಾಡಿ.
ನಂತರ ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಟ್ಟುಬಿಡಿ. ನಂತರ ಒಂದು ಗಾಜಿನ ಡಬ್ಬಕ್ಕೆ ಇದನ್ನು ತುಂಬಿಸಿಕೊಳ್ಳಿ. ಚಪಾತಿ, ಬ್ರೆಡ್, ದೋಸೆಗೆ ಇದು ಚೆನ್ನಾಗಿರುತ್ತದೆ.