1 ಕಪ್ ಭಾಸುಮತಿ ಅಕ್ಕಿ, 1 – ದೊಡ್ಡ ಈರುಳ್ಳಿ – ಉದ್ದಕ್ಕೆ ಕತ್ತರಿಸಿಕೊಂಡಿದ್ದು, 1 ಟೊಮೆಟೊ – ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಹಸಿಮೆಣಸು – 3 ಉದ್ದಕ್ಕೆ ಸೀಳಿಕೊಂಡಿದ್ದು, 1 ಟೇಬಲ್ ಸ್ಪೂನ್ – ಶುಂಠಿ ಬೆಳ್ಳುಳ್ಲಿ ಪೇಸ್ಟ್, ಸ್ವಲ್ಪ – ಪುದೀನಾ ಸೊಪ್ಪು, ಸ್ವಲ್ಪ- ಕೊತ್ತಂಬರಿಸೊಪ್ಪು, 3 ಟೇಬಲ್ ಸ್ಪೂನ್ – ಮೊಸರು, 1-ಪಲಾವ್ ಎಲೆ, ಏಲಕ್ಕಿ – 2, ಲವಂಗ – 2, ಚಕ್ಕೆ – 1 ಪೀಸ್, ತುಪ್ಪ – 2 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಭಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ½ ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ಇಡಿ. ಇದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಪಲಾವ್ ಎಲೆ, ಏಲಕ್ಕಿ, ಲವಂಗ, ಚಕ್ಕೆ ಹಾಕಿ. ನಂತರ ಈರುಳ್ಳಿ ಸೇರಿಸಿ ಇದು ತುಸು ಕೆಂಪಾಗುತ್ತಿದ್ದಂತೆ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಟೊಮೆಟೊ, ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಪುದೀನಾ ಕೊತ್ತಂಬರಿಸೊಪ್ಪು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ ಅದಕ್ಕೆ ಮೊಸರು ಹಾಕಿ ಕೈಯಾಡಿಸಿ. ಇದಕ್ಕೆ 2 ಗ್ಲಾಸ್ ನೀರು ಹಾಕಿ. ನೀರು ಕುದಿ ಬರುತ್ತಿದ್ದಂತೆ ಅದಕ್ಕೆ ಅಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.