alex Certify ಮನೆಯಲ್ಲಿಯೇ ನಿಯಂತ್ರಿಸಬಹುದು ʼಅಧಿಕ ರಕ್ತದೊತ್ತಡʼ ; ಇದಕ್ಕಾಗಿ ಮಾಡಬೇಕು ಈ 4 ಕೆಲಸ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ನಿಯಂತ್ರಿಸಬಹುದು ʼಅಧಿಕ ರಕ್ತದೊತ್ತಡʼ ; ಇದಕ್ಕಾಗಿ ಮಾಡಬೇಕು ಈ 4 ಕೆಲಸ…..!

ಎಣ್ಣೆ ಪದಾರ್ಥಗಳು, ಕರಿದ ತಿನಿಸುಗಳನ್ನು ತಿನ್ನುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಸಮೋಸ, ಫ್ರೆಂಚ್ ಫ್ರೈಸ್, ಹಲ್ವಾ, ಪೂರಿ ಹೀಗೆ ಅನೇಕ ಕರಿದ ತಿಂಡಿಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಇವುಗಳ ಸೇವನೆಯಿಂದ ಕ್ರಮೇಣ ಕೆಟ್ಟ ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.

ಇದರಿಂದಾಗಿ ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಸಮಸ್ಯೆಯಾಗುತ್ತದೆ. ಇದು ನಂತರ ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.ಹಾಗಾಗಿ ಮನೆಯಲ್ಲಿಯೇ ಇರುವಾಗ ಕೆಲವು ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಪಾರಾಗಬಹುದು.

ಅಧಿಕ ರಕ್ತದೊತ್ತಡಕ್ಕೆ ಪರಿಹಾರ

ಕಡಿಮೆ ಉಪ್ಪು ಸೇವನೆ

ಉಪ್ಪಿಲ್ಲದೇ ಹೋದರೆ ಯಾವುದೇ ಆಹಾರಕ್ಕೂ ರುಚಿಯಿರುವುದಿಲ್ಲ. ಆದರೆ ಉಪ್ಪನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನದಲ್ಲಿ 5 ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ವಾಸ್ತವವಾಗಿ ಉಪ್ಪಿನಲ್ಲಿರುವ ಸೋಡಿಯಂನಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಕೆಲವರಿಗೆ ಆಹಾರದ ಮೇಲೆ ಉಪ್ಪು ಉದುರಿಸಿಕೊಂಡು ಸೇವಿಸುವ ಅಭ್ಯಾಸವಿರುತ್ತದೆ, ಅದನ್ನು ತಕ್ಷಣವೇ ನಿಲ್ಲಿಸಿ.

ಒತ್ತಡವನ್ನು ಕಡಿಮೆ ಮಾಡಿ

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗೂ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಟೆನ್ಷನ್, ಸ್ಟ್ರೆಸ್ ನಂತಹ ಸಮಸ್ಯೆಗಳು ಹೆಚ್ಚಾಗಿವೆ. ಇದರಿಂದ ರಕ್ತದೊತ್ತಡ ಹೆಚ್ಚಾಗುವುದು ನಿಶ್ಚಿತ. ಅದಕ್ಕಾಗಿಯೇ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಮನಸ್ಸಿಗೆ ಒತ್ತಡ ಹೇರಬೇಡಿ.

ದೈಹಿಕ ಚಟುವಟಿಕೆಗಳನ್ನು ಮಾಡಿ

ವರ್ಕೌಟ್ ಮಾಡದೇ ಇದ್ದರೆ ರಕ್ತದೊತ್ತಡದಂತಹ ಸಮಸ್ಯೆಗಳು ಬರುವುದು ಖಚಿತ. ಇದಕ್ಕಾಗಿ ನೀವು ಮನೆಯಲ್ಲಿ ಭಾರೀ ಕೆಲಸವನ್ನು ಮಾಡಬಹುದು. ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಬೇಕು. ಭಾರವಾದ ಬಕೆಟ್ ಎತ್ತಬೇಕು, ಸ್ಕಿಪ್ಪಿಂಗ್‌ ಮಾಡಬೇಕು. ಮನೆಯ ಛಾವಣಿಯ ಮೇಲೆ ನಡೆಯಬೇಕು. ಹೀಗೆ ಮಾಡುವುದರಿಂದ ಕೊಲೆಸ್ಟ್ರಾಲ್ ಮತ್ತು ಬಿಪಿ ನಿಯಂತ್ರಿಸಬಹುದು.

ಟೀ-ಕಾಫಿ ಕಡಿಮೆ ಕುಡಿಯಿರಿ

ನಮ್ಮಲ್ಲಿ ಅನೇಕರು ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಸಂಜೆಯ ವೇಳೆಗೆ ನಾಲ್ಕಾರು ಕಪ್‌ನಷ್ಟು ಟೀ, ಕಾಫಿ ಕುಡಿದಿರುತ್ತಾರೆ. ಹೀಗೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಈ ಪಾನೀಯಗಳಲ್ಲಿ ಕೆಫೀನ್ ಪ್ರಮಾಣ ಅಧಿಕವಾಗಿದ್ದು, ಇದು ಅಧಿಕ ರಕ್ತದೊತ್ತಡವನ್ನು ಆಹ್ವಾನಿಸುತ್ತದೆ. ಅದಕ್ಕಾಗಿಯೇ ಸೀಮಿತ ಪ್ರಮಾಣದಲ್ಲಿ ಚಹಾ ಅಥವಾ ಕಾಫಿ ಕುಡಿಯಿರಿ. ಸಂಪೂರ್ಣವಾಗಿ ಅವುಗಳಿಂದ ದೂರವಿದ್ದರೆ ಇನ್ನೂ ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...