ಕೆಲವರು ತಮ್ಮ ಮನೆಯಲ್ಲಿ ಅರ್ಧ ಭಾಗವನ್ನು ಬಾಡಿಗೆ ಕೊಡುತ್ತಾರೆ. ಆದರೆ ಆ ವೇಳೆ ವಾಸ್ತುವನ್ನು ಅನುಸರಿಸಿದರೆ ನಿಮಗೆ ಅದರಿಂದ ಒಳ್ಳೆಯ ಲಾಭ ಪಡೆಯಬಹುದು. ಇಲ್ಲವಾದರೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ. ಹಾಗಾದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಬಾಡಿಗೆ ಕೊಡುವಾಗ ಯಾವ ನಿಯಮ ಅನುಸರಿಸಬೇಕು ಎಂಬುದನ್ನು ತಿಳಿಯಿರಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಬಾಡಿಗೆ ಕೊಡುವಾಗ ಮನೆಯ ಕೆಳಭಾಗವನ್ನು ಬಾಡಿಗೆಗೆ ಕೊಡಬೇಕು. ಮನೆಯ ಮೇಲ್ಭಾಗದಲ್ಲಿ ಹಾಗೂ ಮನೆಯ ಹೆಚ್ಚಿನ ಭಾಗದಲ್ಲಿ ಮನೆಯ ಮಾಲೀಕರು ವಾಸಿಸಿದರೆ ಉತ್ತಮ. ಹಾಗೇ ಒಂದು ವೇಳೆ ಮನೆಗೆ ಬಾಡಿದಾರರು ಬಂದಿಲ್ಲವಾದರೆ ಅದನ್ನು ಹಾಗೇ ಖಾಲಿ ಇಡಬಾರದು. ಅದನ್ನು ಬಳಸಿದರೆ ಉತ್ತಮ. ಇಲ್ಲವಾದರೆ ನಕರಾತ್ಮಕ ಶಕ್ತಿ ಮನೆಯಲ್ಲಿ ವಾಸವಾಗುತ್ತದೆ.
ಹಾಗೇ ಮನೆಯ ಪೂರ್ವ ಭಾಗವನ್ನು ಮತ್ತು ಈಶಾನ್ಯ ಭಾಗವನ್ನು ಸ್ವಚ್ಚವಾಗಿರಿಸಿಕೊಳ್ಳಿ. ಅಲ್ಲಿ ಕಸ, ಕಲ್ಲುಗಳನ್ನು ಇಟ್ಟುಕೊಳ್ಳಬೇಡಿ. ಇಲ್ಲವಾದರೆ ಆರ್ಥಿಕ ಸಮಸ್ಯೆ ಕಾಡುತ್ತದೆ.