alex Certify ಮನೆಯನ್ನು ಇಬ್ಭಾಗ ಮಾಡಿದ ಚಂಡಮಾರುತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯನ್ನು ಇಬ್ಭಾಗ ಮಾಡಿದ ಚಂಡಮಾರುತ…!

ಅಮೆರಿಕದ ಮೇರಿಲ್ಯಾಂಡ್​ ನಗರದಲ್ಲಿ ಮಂಗಳವಾರ ಬೀಸಿದ ಗಾಳಿಯ ಹೊಡೆತಕ್ಕೆ ಮನೆಯೊಂದು ಎರಡು ಹೋಳಾಗಿದೆ. ಕಾಲೇಜ್​ ಪಾರ್ಕ್​ನಲ್ಲಿ ಹಾನಿಗೊಳಗಾದ ಮನೆಯ ವೀಡಿಯೊವನ್ನು ಪತ್ರಕರ್ತ ಟಾಮ್​ ರೌಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ನಂತರ ವೈರಲ್​ ಆಗಿದೆ. ಮನೆ ಹೇಗೆ ಇಬ್ಭಾಗವಾಯಿತು ಎಂಬ ಕುತೂಹಲವು ನೆಟ್ಟಿಗರನ್ನು ಕುತೂಹಲಕ್ಕೆ ತಳ್ಳಿತು.

ಚಂಡಮಾರುತವು ಈ ಮನೆಯನ್ನು ಎರಡು ಭಾಗಗಳಾಗಿ ವಿಭಜಿಸಿದೆ. ನಾನು ಇಲ್ಲಿ ವಾಸಿಸುವ ಮೇರಿಲ್ಯಾಂಡ್​ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ, ಅವರ ಕೊಠಡಿ ಜೊತೆಗಾರರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ ಎಂದು ಟಾಮ್​ ರೌಸಿ ವಿವರಿಸಿದ್ದಾರೆ.

ಗಂಟೆಗೆ 70 ಮೈಲುಗಳಷ್ಟು ವೇಗದಲ್ಲಿ ಸರಳ ರೇಖೆಯಲ್ಲಿ ಚಲಿಸುವಂತೆ ಬಂದ ಗಾಳಿಯಿಂದ ಮನೆಯು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿದೆ ಎಂದು ಹವಾಮಾನಶಾಸ್ತ್ರಜ್ಞ ಬಿಲ್​ ಕೆಲ್ಲಿ ಹೇಳಿದರು.

ಮುರಿದ ಮನೆಯ ವಿಡಿಯೊದ ಕುರಿತು ಪ್ರತಿಕ್ರಿಯಿಸಿದ ಟ್ವಿಟ್ಟರ್​ ಬಳಕೆದಾರರು, ನಾನು ಕಾಲೇಜ್​ ಪಾರ್ಕ್​ನಲ್ಲಿ ವಾಸಿಸುತ್ತಿದ್ದೇನೆ, ನನ್ನ ಜೀವನದಲ್ಲಿ ಗುಡುಗು ಸಹಿತ ಮಳೆಯಿಂದ ಇಷ್ಟೊಂದು ಹಾನಿಯನ್ನು ನೋಡಿಲ್ಲ. ಎಷ್ಟೋ ಮರಗಳು ಉರುಳಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮಂಗಳವಾರ ಮೇರಿಲ್ಯಾಂಡ್​ ಮತ್ತು ವಾಷಿಂಗ್ಟನ್​ ರಾಜ್ಯಗಳಲ್ಲಿ ಭಾರೀ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗಿದೆ. ಚಂಡಮಾರುತವು ಮೇರಿಲ್ಯಾಂಡ್​ ಮತ್ತು ವಾಷಿಂಗ್ಟನ್​ನ ಹಲವು ಪ್ರದೇಶಗಳಲ್ಲಿ ವಿದ್ಯುತ್​ ಕಡಿತವನ್ನು ಉಂಟುಮಾಡಿದೆ. ಪ್ರಿನ್ಸ್​ ಜಾರ್ಜ್​ ಕೌಂಟಿ ಅಗ್ನಿಶಾಮಕ ಇಲಾಖೆಯು ಸುಮಾರು 360 ತುರ್ತು ಕರೆಗಳಿಗೆ ಪ್ರತಿಕ್ರಿಯಿಸಿದೆ ಎಂದು ಟ್ವೀಟ್​ ಮಾಡಿದೆ.

https://twitter.com/mcortes2013/status/1547028826470944768?ref_src=twsrc%5Etfw%7Ctwcamp%5Etweetembed%7Ctwterm%5E1547028826470944768%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fstorm-splits-a-house-into-two-in-the-us-8027126%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...