ವಾಸ್ತು ಶಾಸ್ತ್ರದಲ್ಲಿ ಎಲ್ಲಾ ದಿಕ್ಕುಗಳಿಗೂ ವಿಭಿನ್ನವಾದ ಮಹತ್ವವಿದೆ. ಎಲ್ಲಾ ಶಕ್ತಿಗಳಿಗೂ ನಿರ್ಧಿಷ್ಟವಾದ ಸ್ಥಳಗಳಿರುತ್ತದೆ. ಜಲ, ಅಗ್ನಿ, ವಾಯು ಎಲ್ಲಾ ಪ್ರಕಾರದ ತತ್ವಗಳಿಗೂ ಕೂಡ ನಿರ್ದಿಷ್ಟವಾದ ದಿಕ್ಕುಗಳಿರುತ್ತದೆ.
ಹಾಗೇ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುತ್ತದೆ. ಆದರೆ ಮನೆಯೊಳಗೆ ಸಕಾರಾತ್ಮಕ ಶಕ್ತಿಗಳು ಮಾತ್ರ ಪ್ರವೇಶಿಸಲು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಕಾರಾತ್ಮಕ ಸ್ಥಾನದಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ ಧನಸಂಪತ್ತು ಇರುತ್ತದೆ. ಹಾಗಾಗಿ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡಿ.
ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಉತ್ತರ ದಿಕ್ಕಿಗೆ ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡವನ್ನು ಇಡಿ. ಹಾಗೇ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಿ. ಯಾಕೆಂದರೆ ಮಹಿಳೆಯರು ಮನೆಯ ಗೃಹಲಕ್ಷ್ಮಿಯಾಗಿರುತ್ತಾರೆ. ಮತ್ತು ಕುಬೇರನ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿಡಿ. ಇದರಿಂದ ಧನ ಸಂಪತ್ತು ಮನೆಗೆ ಆಗಮಿಸುತ್ತದೆ.