ಲಕ್ಷ್ಮಿ ಚಂಚಲೆ. ಆಕೆಯನ್ನು ಒಲಿಸಿಕೊಳ್ಳುವುದು ಕಷ್ಟ. ಒಬ್ಬರ ಮನೆಯಲ್ಲೇ ಲಕ್ಷ್ಮಿ ತುಂಬಾ ದಿನ ವಾಸ ಮಾಡುವುದಿಲ್ಲ ಎನ್ನಲಾಗುತ್ತದೆ. ಎಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಿಗದಿರುವಾಗ ಹಾಗೂ ಪದೇ ಪದೇ ಆರ್ಥಿಕ ನಷ್ಟ ಎದುರಾಗುತ್ತಿದ್ದರೆ ಲಕ್ಷ್ಮಿ ಮನೆ ಬಿಟ್ಟಿದ್ದಾಳೆ ಎಂದರ್ಥ. ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ನೆಲಸಬೇಕೆಂದ್ರೆ ಪೊರಕೆಗೆ ಸಂಬಂಧಿಸಿದ ಕೆಲ ಉಪಾಯಗಳನ್ನು ಅನುಸರಿಸಬೇಕು.
ಪೊರಕೆಯಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆಂಬ ನಂಬಿಕೆಯಿದೆ. ಮನೆಯಲ್ಲಿ ಪೊರಕೆ ರೂಪದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಲಕ್ಷ್ಮಿ ರೂಪದಲ್ಲಿರುವ ಪೊರಕೆಯನ್ನು ಮಂಗಳವಾರ, ಶನಿವಾರ ಮತ್ತು ಭಾನುವಾರ ಮಾತ್ರ ಖರೀದಿ ಮಾಡಬೇಕು. ಇದ್ರಿಂದ ಸದಾ ಮನೆಯಲ್ಲೇ ಲಕ್ಷ್ಮಿ ನೆಲೆಸುತ್ತಾಳೆ.
ಪೊರಕೆ ಹಾಳಾದ್ರೆ ಯಾವುದಾದ್ರೂ ದಿನ ಪೊರಕೆಯನ್ನು ಕಸಕ್ಕೆ ಹಾಕಬೇಡಿ. ಶನಿವಾರ ಮಾತ್ರ ಪೊರಕೆಯನ್ನು ಎಸೆಯಿರಿ. ಶುಕ್ರವಾರ ಅಪ್ಪಿತಪ್ಪಿಯೂ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬೇಡಿ. ಪೊರಕೆ ಲಕ್ಷ್ಮಿ ರೂಪವಾಗಿದ್ದು, ಪೊರಕೆ ಎಸೆದ್ರೆ ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಹಾಕಿದಂತಾಗುತ್ತದೆ.
ಮನೆಗೆ ಹೊಸ ಪೊರಕೆ ತಂದ ತಕ್ಷಣ ಒಂದು ಕೆಲಸವನ್ನು ಮಾಡಿ. ಪೊರಕೆ ಹಿಡಿಕೆಗೆ ಬಿಳಿ ದಾರವನ್ನು ಕಟ್ಟಿ. ಹೀಗೆ ಮಾಡಿದ್ರೆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ. ಆರ್ಥಿಕ ವೃದ್ಧಿಯಾಗುತ್ತದೆ.