ಮನೆಗೆಲಸದಲ್ಲಿ ಪತ್ನಿಗೆ ಸಹಾಯ ಮಾಡುವ ಪುರುಷರ ಸಂಖ್ಯೆ ಬಹಳ ಕಡಿಮೆ. ಹೆಂಡ್ತಿಯಿಂದ ಸೇವೆ ಮಾಡಿಸಿಕೊಂಡು ಆರಾಮಾಗಿ ಇರುವವರೇ ಹೆಚ್ಚು. ನೀವು ಕೂಡ ಮನೆಗೆಲಸದಲ್ಲಿ ನೆರವಾಗದ ಸೋಮಾರಿಯಾಗಿದ್ರೆ, ಇನ್ಮೇಲಾದ್ರು ಎಚ್ಚೆತ್ತುಕೊಳ್ಳಿ.
ಯಾಕಂದ್ರೆ ಮನೆಗೆಲಸ ಮಾಡದ ಪುರುಷರು ಪತ್ನಿಯರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚು. ಫ್ರಾನ್ಸ್ ನಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಇದು ದೃಢಪಟ್ಟಿದೆ. ಹೆಂಡತಿಯರ ಮನಸ್ಸನ್ನು ಗೆಲ್ಲುವ ಬೆಸ್ಟ್ ಉಪಾಯ ಅಂದ್ರೆ ಪಾತ್ರೆ ತೊಳೆಯೋದು ಮತ್ತು ನೆಲ ಒರೆಸುವುದಂತೆ.
ಟಾಯ್ಲೆಟ್ ಕ್ಲೀನ್ ಮಾಡೋದು, ವಾಷಿಂಗ್ ಮಷಿನ್ ಗೆ ಬಟ್ಟೆ ಹಾಕೋದು ಹೀಗೆ ಸಣ್ಣ ಪುಟ್ಟ ಕೆಲಸವನ್ನೂ ಮಾಡದ ಗಂಡಂದಿರಿಗೆ ಪತ್ನಿಯರು ವಂಚಿಸ್ತಾರಂತೆ. ಹಲವು ದೇಶಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ವಿವಾಹಿತ ಮಹಿಳೆಯರು ಹಾದಿ ತಪ್ಪಲು ಪ್ರಮುಖ ಕಾರಣ ಇದು.
ಮನೆಗೆಲಸ ತಪ್ಪಿಸಿಕೊಳ್ಳಲು ಗಂಡಂದಿರು ಮಾಡೋ ಕಸರತ್ತು ನೋಡಿ ಶೇ.86ರಷ್ಟು ಪತ್ನಿಯರು ರೋಸಿ ಹೋಗಿದ್ದಾರಂತೆ. ಇದೇ ಕಾರಣಕ್ಕೆ ಜಗಳ ನಡೆಯುತ್ತೆ ಎನ್ನುತ್ತಾರೆ ಶೇ.84ರಷ್ಟು ಮಹಿಳೆಯರು. ಬ್ರಿಟನ್ ಮತ್ತು ಫ್ರಾನ್ಸ್ ನಲ್ಲಿ ಪುರುಷರಿಗೆಲ್ಲ ಈಗ ಜ್ಞಾನೋದಯವಾಗಿದೆ, ಮನೆಗೆಲಸದಲ್ಲಿ ಪತ್ನಿಯರಿಗೆ ನೆರವಾಗಲು ಗಂಡಂದಿರು ಮುಂದಾಗುತ್ತಿದ್ದಾರೆ.