alex Certify ಮನೆಗೆಲಸಕ್ಕೆ ಬಂದವರ ಜೊತೆ ಲವ್ವಿ-ಡವ್ವಿ…! ಕುಟುಂಬ ತೊರೆದು ಮೇಸ್ತ್ರಿಗಳ ಜೊತೆ ಮಹಿಳೆಯರು ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆಲಸಕ್ಕೆ ಬಂದವರ ಜೊತೆ ಲವ್ವಿ-ಡವ್ವಿ…! ಕುಟುಂಬ ತೊರೆದು ಮೇಸ್ತ್ರಿಗಳ ಜೊತೆ ಮಹಿಳೆಯರು ಪರಾರಿ

ವಿವಾಹಿತರಾಗಿದ್ದ ಇಬ್ಬರು ಮಹಿಳೆಯರಿಗೆ ಮೇಸ್ತ್ರಿಗಳ ಮೇಲೆ ಪ್ರೇಮಾಂಕುರವಾದ ಹಿನ್ನೆಲೆಯಲ್ಲಿ ಇಬ್ಬರೂ ಮಹಿಳೆಯರು ತಮ್ಮ ಪತಿಯಂದಿರನ್ನು ತೊರೆದು ಮೇಸ್ತ್ರಿಗಳ ಜೊತೆ ಓಡಿದ ಹೋದ ಆಘಾತಕಾರಿ ಘಟನೆಯು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ. ಈ ಮೇಸ್ತ್ರಿಗಳು ಮಹಿಳೆಯರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮಹಿಳೆಯರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಮೇಸ್ತ್ರಿಗಳು ಮಹಿಳೆಯರ ಜೊತೆ ಸ್ನೇಹ ಸಂಪಾದಿಸಿದ್ದರು. ಬಳಿಕ ಇವರ ನಡುವೆ ಲವ್ವಿಡವ್ವಿ ಶುರುವಾಗಿತ್ತು.

ಈ ಮೇಸ್ತ್ರಿಗಳ ಜೊತೆಯಲ್ಲಿ ಇಬ್ಬರು ಮಹಿಳೆಯರು ಎಸ್ಕೇಪ್​ ಆಗಿದ್ದಾರೆ. ಮಹಿಳೆಯರ ಗಂಡನ ಮನೆಯವರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ನಿಶ್ಚಿಂದಾ ಪೊಲೀಸ್​ ಠಾಣಾ ವ್ಯಾಪ್ತಿಯ ಹಾರ್ವಾ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಈ ಇಬ್ಬರು ಮೇಸ್ತ್ರಿಗಳು ಮಹಿಳೆಯರನ್ನು ಮೊದಲು ತಮ್ಮೂರು ಮುರ್ಶಿದಾಬಾದ್​​​ಗೆ ಕೊಂಡೊಯ್ದಿದ್ದಾರೆ. ಬಳಿಕ ಇಬ್ಬರು ಮಹಿಳೆಯರ ಜೊತೆಯಲ್ಲಿ ಮುಂಬೈಗೆ ಪರಾರಿಯಾಗಿದ್ದಾರೆ.

ಇಬ್ಬರು ಮಹಿಳೆಯರ ಫೋನ್​ ಕಾಲ್ ಪರಿಶೀಲನೆ ಮಾಡಿದ ಬಳಿಕವೇ ಪೊಲೀಸರಿಗೆ ಈ ವಿಚಾರ ತಿಳಿದಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೇಸ್ತ್ರಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...