ಹಾವುಗಳ ಹೆಸರು ಕೇಳಿದ್ರೇನೇ ನಮಗೆ ಭಯ. ಆದರೆ ತಪ್ಪಾಗಿ ಗ್ರಹಿಸಲ್ಪಟ್ಟ ಜೀವಿಗಳಲ್ಲಿ ಹಾವು ಕೂಡ ಒಂದು ಎನ್ನುತ್ತವೆ ಸಮೀಕ್ಷೆಗಳು. ಹಾವುಗಳನ್ನು ಕಂಡರೆ ಭಯ, ಅವುಗಳನ್ನು ಕೆಟ್ಟ ಶಕುನವೆಂದು ಪರಿಗಣಿಸುತ್ತೇವೆ. ಆದ್ರೆ ಭಾರತದಲ್ಲಿ ಹಾವುಗಳನ್ನು ನಾವು ದೇವರಂತೆ ಪೂಜಿಸುತ್ತೇವೆ.
ಭೂಮಿಯ ಮೇಲೆ 3,000 ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಅಂಟಾರ್ಕ್ಟಿಕಾ, ಐಸ್ಲ್ಯಾಂಡ್, ಐರ್ಲೆಂಡ್, ಗ್ರೀನ್ಲ್ಯಾಂಡ್ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಎಲ್ಲೆಡೆ ಅವು ಕಂಡುಬರುತ್ತವೆ. ಇವುಗಳಲ್ಲಿ ಸುಮಾರು 600 ಜಾತಿಗಳು ವಿಷಕಾರಿ, ಕೇವಲ 200 ಜಾತಿಯ ಹಾವುಗಳು 100 ಪ್ರತಿಶತ ವಿಷಕಾರಿಯಾಗಿವೆ. ಮನುಷ್ಯರನ್ನು ಕೊಲ್ಲುವ ಅಥವಾ ತೀವ್ರವಾಗಿ ಗಾಯಗೊಳಿಸುವ ಸಾಮರ್ಥ್ಯ ಹೊಂದಿವೆ. ಭಾರತದಲ್ಲಿನ ಹಾವುಗಳು ಇದಕ್ಕೆ ಹೊರತಾಗಿಲ್ಲ.
ಕೊಲುಬ್ರಿಡೆ, ಎಲಾಪಿಡೆ, ಹೈಡ್ರೋಫಿಡೆ ಮತ್ತು ವೈಪೆರಿಡೆ, ರಸೆಲ್ಸ್ ವೈಪರ್ (ಡಬೊಯಾ ರಸ್ಸೆಲ್ಲಿ), ಕರೈಟ್ (ಬಂಗಾರಸ್ ಜಾತಿಗಳು) ಮತ್ತು ನಾಗರಹಾವು (ನಾಜಾ ಜಾತಿಗಳು) ಭಾರತದಲ್ಲಿ ಅತಿ ಹೆಚ್ಚು ಕಚ್ಚುವ ಹಾವಿನ ಜಾತಿಗಳಾಗಿವೆ. ಹಾವುಗಳನ್ನು ವಿಶ್ವದ ಅತ್ಯಂತ ಹಳೆಯ ಜೀವಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವಿವಿಧ ಹಾವಿನ ಜಾತಿಗಳ ಉಲ್ಲೇಖವು ಪ್ರತಿಯೊಂದು ನಾಗರಿಕತೆಯಲ್ಲಿಯೂ ಕಂಡುಬಂದಿದೆ. ಪ್ರಪಂಚದಲ್ಲಿ ಸುಮಾರು 3,458 ಜಾತಿಯ ಹಾವುಗಳಿವೆ.
ಉತ್ತರ ಕೆನಡಾದ ಹಿಮಾವೃತ ಟಂಡ್ರಾದಿಂದ ಹಿಡಿದು ಅಮೆಜಾನ್ನ ಹಸಿರು ಕಾಡುಗಳು, ಹಿಮಾಲಯದ ಬಯಲು ಪ್ರದೇಶಗಳವರೆಗೆ ಪ್ರಪಂಚದ ಪ್ರತಿಯೊಂದು ಮರುಭೂಮಿ ಮತ್ತು ಸಾಗರದಲ್ಲಿ ಇವು ಕಂಡುಬರುತ್ತದೆ. ಅವರು ತುಂಬಾ ಚುರುಕಾದ ಬೇಟೆಗಾರರು. ಹಾವುಗಳು ಮತ್ತು ಸಂಬಂಧಿತ ಜಾತಿಗಳು ಸಹ ಪ್ರಕೃತಿಯ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.WHO ವರದಿಯ ಪ್ರಕಾರ, 2000 ರಿಂದ 2019 ರವರೆಗೆ ಭಾರತದಲ್ಲಿ ಹಾವು ಕಡಿತದಿಂದ ಸಾವನ್ನಪ್ಪಿದವರ ಅಂಕಿಅಂಶಗಳು ಆಘಾತಕಾರಿಯಾಗಿವೆ.
ಭಾರತದಲ್ಲಿ 19 ವರ್ಷಗಳಲ್ಲಿ, ಅಂದಾಜು 12 ಲಕ್ಷ ಜನರು ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ, ಇದು ವಿಶ್ವದಲ್ಲೇ ಅತಿ ಹೆಚ್ಚು. ಭಾರತದಲ್ಲಿ ಪ್ರತಿ ವರ್ಷ ಸರಾಸರಿ 58,000 ಸಾವುಗಳು ಹಾವು ಕಡಿತದಿಂದ ಸಂಭವಿಸುತ್ತವೆ. ಹಾವು ಮತ್ತು ಹಾವು ಕಡಿತದ ಬಗ್ಗೆ ಅಸಮರ್ಪಕ ಗ್ರಹಿಕೆ, ಅರಿವಿನ ಕೊರತೆ ಮತ್ತು ಕಡಿಮೆ ಜ್ಞಾನವೇ ಇದಕ್ಕೆ ಕಾರಣ. ವಿಷಕಾರಿ ಹಾವಿನ ಕಡಿತದ ನಂತರ ಅನೇಕ ಗ್ರಾಮೀಣ ಪ್ರದೇಶದ ಜನರಿಗೆ ಚಿಕಿತ್ಸೆಯೇ ದೊರೆಯುವುದಿಲ್ಲ. 2001-2014ರ ಅವಧಿಯಲ್ಲಿ ಅದರಲ್ಲೂ ಮಳೆಗಾಲದಲ್ಲಿ ಅತಿ ಹೆಚ್ಚು ಹಾವು ಕಡಿತ ಪ್ರಕರಣಗಳು ವರದಿಯಾಗಿವೆ.
ಭಾರತವನ್ನು ‘ಹಾವು ಮೋಡಿ ಮಾಡುವವರ ದೇಶ’ ಎಂದು ಕರೆಯಲಾಗಿದ್ದರೂ, ಹಾವು ಕಡಿತದ ಪ್ರಕರಣಗಳು ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು. ಆದಾಗ್ಯೂ, ಅಮೆರಿಕಾದಲ್ಲಿ ಉತ್ತಮ ಚಿಕಿತ್ಸೆಯಿಂದಾಗಿ, ಕೆಲವೇ ಜನರು ಸಾಯುತ್ತಾರೆ. WHO ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ 5 ಮಿಲಿಯನ್ ಹಾವು ಕಡಿತದ ಪ್ರಕರಣಗಳು ಸಂಭವಿಸುತ್ತವೆ. ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ. ಹೊಲಗಳಲ್ಲಿ ಹಾವು ಇರುವುದು ಒಳ್ಳೆಯ ಸಂಕೇತ.
ಹೊಲದಲ್ಲಿರುವ ಕೀಟಗಳನ್ನು ಹಾವುಗಳು ತಿಂದು ಬೆಳೆ ಹಾನಿ ತಪ್ಪಿಸುತ್ತವೆ. ಹಾವುಗಳು ಧಾನ್ಯದ ಶತ್ರುಗಳೆನಿಸಿಕೊಂಡ ಇಲಿಗಳನ್ನು ಸಹ ತಿನ್ನುತ್ತವೆ. ಹಾವಿನ ವಿಷಕ್ಕೆ ಇರುವ ಏಕೈಕ ಚಿಕಿತ್ಸೆ ಆಂಟಿ-ವೆನಮ್ ಸೀರಮ್ ಅಥವಾ ಆಂಟಿ-ಟಾಕ್ಸಿನ್ ಸೀರಮ್. ಇವುಗಳನ್ನು ಹಾವಿನ ವಿಷದಿಂದಲೇ ತಯಾರಿಸಲಾಗುತ್ತದೆ. ಅನೇಕ ಔಷಧಿಗಳನ್ನು ಹಾವಿನ ವಿಷದಿಂದ ತಯಾರಿಸಲಾಗುತ್ತದೆ, ಅದನ್ನು ಹೃದಯದ ಕಾಯಿಲೆಗಳಿಗೆ ಬಳಸಲಾಗುತ್ತದೆ. ಹೃದಯಾಘಾತ ಮತ್ತು ಹೃದಯ ವೈಫಲ್ಯದ ಸಂದರ್ಭದಲ್ಲಿಯೂ ಸಹ ಹಾವಿನ ವಿಷದಿಂದ ತಯಾರಿಸಿದ ಔಷಧಿಗಳು ಬಹಳ ಪರಿಣಾಮಕಾರಿ.