alex Certify ಮನರಂಜನೆ ಮಾತ್ರವಲ್ಲ ಜಾಲತಾಣಗಳಿಂದ ಗಳಿಸಬಹುದು ಆದಾಯ; ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನರಂಜನೆ ಮಾತ್ರವಲ್ಲ ಜಾಲತಾಣಗಳಿಂದ ಗಳಿಸಬಹುದು ಆದಾಯ; ಇಲ್ಲಿದೆ ಟಿಪ್ಸ್‌

ಅಂತರ್ಜಾಲದಲ್ಲಿ ಹಣ ಗಳಿಸಲು ವಿವಿಧ ವಿಧಾನಗಳಿವೆ. ಆದರೆ ಅಷ್ಟೇ ಅಪಾಯವೂ ಅವುಗಳಲ್ಲಿದೆ. ಇಂಟರ್ನೆಟ್‌ನಿಂದ ಮನೆಯಿಂದಲೇ ಸಂಪಾದಿಸುವುದು ಎಷ್ಟು ಸುಲಭವೋ ಅಷ್ಟೇ ರಿಸ್ಕಿ ಕೂಡ.

ನೀವೂ ಕೂಡ ಸೋಶಿಯಲ್ ಮೀಡಿಯಾದಿಂದ ಹಣ ಗಳಿಸಬೇಕೆಂದರೆ ಇದಕ್ಕಾಗಿ ಅನೇಕ ವಿಷಯಗಳನ್ನು ತಿಳಿದುಕೊಂಡಿರಬೇಕು. ನಿಮ್ಮ ನಿತ್ಯದ ಕೆಲಸಗಳನ್ನು ಮಾಡುತ್ತಲೇ ಹಣ ಗಳಿಸಬಹುದು, ಅಥವಾ ಜಾಲತಾಣಗಳಲ್ಲಿ ಪಾಪ್ಯುಲರ್‌ ಆಗುವ ಮೂಲಕವೂ ಸಂಪಾದನೆ ಮಾಡಲು ಅವಕಾಶಗಳಿವೆ.

ಸ್ಥಿರತೆ ಅಥವಾ ಅನಿಶ್ಚಿತತೆ: ನೀವು ನಿರ್ದಿಷ್ಟ ಉದ್ಯೋಗ ಮಾಡಿದಾಗ ಆದಾಯವು ಸ್ಥಿರವಾಗಿರುತ್ತದೆ. ಅದಕ್ಕಾಗಿಯೇ ನೀವು ಸುರಕ್ಷಿತವಾಗಿರುತ್ತೀರಿ. ಆದರೆ ಜನಪ್ರಿಯತೆ ಗಳಿಸಿದ ಬಳಿಕ ಕೆಲವು ತಿಂಗಳುಗಳ ಕಾಲ ಬಹಳಷ್ಟು ಸಂಪಾದಿಸುತ್ತೀರಿ, ಇನ್ನು ಕೆಲವು ತಿಂಗಳು ಆದಾಯವೇ ಇಲ್ಲದಿರಬಹುದು.

ನಿಮಗಾಗಿ ಸಮಯ: ಕಚೇರಿ ಕೆಲಸದಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ಯಾವಾಗ ಕಚೇರಿಗೆ ಹೋಗಬೇಕು, ಯಾವಾಗ ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಿರುತ್ತದೆ. ಆದರೆ ಇನ್‌ಫ್ಲುಯೆನ್ಸರ್‌ ಕೆಲಸಕ್ಕೆ ನಿಗದಿತ ಸಮಯದ ಮಿತಿ ಇಲ್ಲ. ವಿಶೇಷವಾಗಿ ಆರಂಭಿಕ ಹಂತಗಳಲ್ಲಿ ಎಡೆಬಿಡದೆ ಕೆಲಸ ಮಾಡಬೇಕಾಗುತ್ತದೆ. ವಿಷಯದ ಸಂಶೋಧನೆ, ಸ್ಕ್ರಿಪ್ಟಿಂಗ್, ಶೂಟಿಂಗ್, ಎಡಿಟ್ ಮಾಡುವ ಎಲ್ಲಾ ಕೆಲಸಗಳನ್ನು ಸ್ವತಃ ಮಾಡಬೇಕಾಗಿ ಬರುತ್ತದೆ.

ಸೃಜನಾತ್ಮಕವಾಗಿರುವುದು: ಕಚೇರಿಯಲ್ಲಿ ಬಾಸ್‌ ಹೇಳಿದ ಕೆಲಸವನ್ನು ಪೂರ್ತಿ ಮಾಡಿದರಾಯ್ತು. ಆದ್ರೆ ಜಾಲತಾಣಗಳಲ್ಲಿ ಹಾಗಲ್ಲ. ಸಾಕಷ್ಟು ನಾವೀನ್ಯತೆ, ಸೃಜನಶೀಲತೆಯ ಅವಶ್ಯಕತೆಯಿರುತ್ತದೆ. ಏಕೆಂದರೆ ಜನರು ಹೊಸತನವನ್ನು ಬಯಸುತ್ತಾರೆ. ಸೋಶಿಯಲ್‌ ಮೀಡಿಯಾ ಮೂಲಕ ಹಣ ಗಳಿಸುವ ಆಸೆಯಿದ್ದರೆ Instagramನಲ್ಲಿ ಬ್ಯುಸಿನೆಸ್‌ ಖಾತೆ ಆರಂಭಿಸಬಹುದು. ಅಥವಾ ಯುಟ್ಯೂಬ್‌ ಚಾನೆಲ್‌ ಕೂಡ ಓಪನ್‌ ಮಾಡಬಹುದು. ನಿಮ್ಮಲ್ಲೇನಾದ್ರೂ ವಿಶೇಷ ಪ್ರತಿಭೆಯಿದ್ದರೆ ಅದನ್ನು ಪ್ರಸ್ತುತಪಡಿಸಬಹುದು. ನಿಮ್ಮ ಬಗೆಗಿನ ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಳ್ಳಬಹುದು.

ನಿಮ್ಮ ಆಯ್ಕೆಯ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ನಿಮ್ಮ ಸೃಜನಾತ್ಮಕತೆಯನ್ನು ಪ್ರದರ್ಶಿಸಿ. ಇತರರಿಗಿಂತ ನೀವು ಪ್ರಸ್ತುತಪಡಿಸುವ ವಿಷಯಗಳು ಭಿನ್ನವಾಗಿರಲಿ. ವೀಡಿಯೊ ವಿಷಯದ ಗುಣಮಟ್ಟ ಉತ್ತಮವಾಗಿರಬೇಕು. ಚಿತ್ರೀಕರಣ ಮತ್ತು ವಿಷಯವನ್ನು ಸಂಪಾದಿಸಲು ಉತ್ತಮ ಸಾಧನ ಮತ್ತು ಸಾಫ್ಟ್‌ವೇರ್ ಬಳಸಿ. ಈ ವಿಷಯಕ್ಕೆ ಸಂಬಂಧಿಸಿದ ಹುಡುಕಾಟದಲ್ಲಿ ಬಳಕೆದಾರರು ಸಾಮಾನ್ಯವಾಗಿ ಬಳಸುವ ವೀಡಿಯೊ ವಿಷಯವನ್ನು ಶೀರ್ಷಿಕೆಯಲ್ಲಿ ಬಳಸಿ. ಪದಬಳಕೆ ಸರಿಯಾಗಿದ್ದರೆ ಹೆಚ್ಹೆಚ್ಚು ವ್ಯೂಸ್‌ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...