ಮಧ್ಯಾಹ್ನದ ಊಟದ ಸಮಯದಲ್ಲಿ ನೀವು ಈ ಕೆಲವು ಆಹಾರಗಳನ್ನು ಸೇವಿಸುವುದು ನಿಮ್ಮ ದೇಹ ತೂಕ ಹೆಚ್ಚಲು ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ?
ಐಸ್ ಕ್ರೀಮ್ ಅನ್ನು ನಿತ್ಯ ಮಧ್ಯಾಹ್ನದ ವೇಳೆ ಸೇವಿಸುವುದರಿಂದ ದೇಹ ತೂಕ ಹೆಚ್ಚುತ್ತದೆ. ಹಾಗಾಗಿ ಐಸ್ ಕ್ರೀಮ್ ಅನ್ನು ವಾರಕ್ಕೊಮ್ಮೆ ಸೇವಿಸಿದರೆ ಸಾಕು. ಬೇಸಿಗೆಯಲ್ಲಿ ಇದು ದೇಹವನ್ನು ತಂಪು ಮಾಡುತ್ತದೆ ಎಂಬುದು ತಪ್ಪು ನಂಬಿಕೆ.
ಬೆಳಗ್ಗಿನ ತಿಂಡಿಯನ್ನೇ ಮಧ್ಯಾಹ್ನಕ್ಕೂ ಸೇವಿಸದಿರಿ. ಒಂದು ಬಾರಿ ಬೇಯಿಸಿದರೆ ಎರಡು ಮೂರು ಬಾರಿಗೂ ಆಗುತ್ತದೆ ಎಂದುಕೊಳ್ಳದಿರಿ. ಇದು ಯಾವಾಗಲಾದರೊಮ್ಮೆ ಪರವಾಗಿಲ್ಲ, ನಿತ್ಯ ಹೀಗೆ ಮಾಡಿದರೆ ದೇಹ ತೂಕ ಹೆಚ್ಚುವ ಸಾಧ್ಯತೆ ಇದೆ.
ಮಧ್ಯಾಹ್ನ ಊಟವಾದ ತಕ್ಷಣ ಮಲಗಿ ನಿದ್ದೆ ಹೊಡೆಯುವ ಅಭ್ಯಾಸವಿದ್ದರೆ ಅದನ್ನು ಬಿಟ್ಟು ಬಿಡಿ. ಬೆಳಗ್ಗೆ ಸಾಕಷ್ಟು ಕೆಲಸ ಮಾಡಿ ಸುಸ್ತಾಗಿದೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದುಕೊಂಡರೆ ಕೆಲವೇ ದಿನಗಳಲ್ಲಿ ದೇಹತೂಕ ವಿಪರೀತ ಹೆಚ್ಚುತ್ತದೆ.