ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಅಂಶವಿರುವ ಆಹಾರವನ್ನು ಮಾತ್ರ ಸೇವಿಸಬೇಕು. ಗ್ಲೈಸೆಮಿಕ್ ಅಂಶ ದೇಹದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.
ಆದರೆ ಮಧುಮೇಹಿಗಳ ಆರೋಗ್ಯಕರವಾದ ಆಹಾರದಲ್ಲಿ ಕಡಲೆಕಾಯಿ ಸೇವಿಸುವುದು ಉತ್ತಮವೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸಂಶೋಧನೆ ಪ್ರಕಾರ ಕಡಲೆಕಾಯಿ ತುಂಬಾ ಕಡಿಮೆ ಗ್ಲೈಸೆಮಿಕ್ ಅಂಶವನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿರುವ ಮ್ಯಾಂಗನೀಸ್ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕೊಬ್ಬು ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಹಾಗಾಗಿ ಮಧುಮೇಹಿಗಳು ಹುರಿದ ಕಡಲೆಕಾಯಿ, ಹಸಿ ಕಡಲೆಕಾಯಿ ಸೇವಿಸಬಹುದು. ದಿನಕ್ಕೆ ಬೆರಳೆಣಿಕೆಯಷ್ಟು ಕಡಲೆಕಾಯಿ ತಿನ್ನುವುದು ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.