ಮಧುಮೇಹಿಗಳು ಸ್ವೀಟ್ ತಿನ್ನಲು ಹಿಂದು ಮುಂದು ನೋಡುತ್ತಾರೆ. ಅದರಲ್ಲೂ ಸಕ್ಕರೆ ಬೆರೆಸಿದ ಪಾನೀಯಗಳನ್ನು ಕುಡಿಯಲು ಹಿಂಜರಿಕೆ. ಇಂತಹವರು ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಬಹುದು.
ಹುರಿಟ್ಟಿನ ಜ್ಯೂಸ್ ಡಯಾಬಿಟಿಸ್ ಇರುವವರಿಗೆ ಉತ್ತಮ. ಇದರ ಸೇವನೆಯಿಂದ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಈ ಜ್ಯೂಸ್ ಮಾಡುವ ವಿವರ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ರಾಗಿ ಹುರಿ ಹಿಟ್ಟು 4 ಚಮಚ
ಹುಣಸೆಹುಳಿ 2 ಚಮಚ
ಬೆಲ್ಲ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ
ರಾಗಿಯ ಹುರಿಹಿಟ್ಟು ಅಂಗಡಿಗಳಲ್ಲಿ ದೊರೆಯುತ್ತದೆ. ಒಂದು ಲೋಟಕ್ಕೆ ರಾಗಿ ಹುರಿ ಹಿಟ್ಟು ಮತ್ತು ಹುಣಸೆ ಹುಳಿ ಸೇರಿಸಿ ತಕ್ಕಷ್ಟು ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಬೇಕು. ನಂತರ ಸ್ವಲ್ಪ ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ತೆಳ್ಳಗಿನ ಜ್ಯೂಸ್ ಮಾಡಿ. ಇದನ್ನು ಹಾಗೇ ಕುಡಿಯಬಹುದು ಅಥವಾ ಬಿಸಿ ಮಾಡಿ ಕುದಿಸಿ ಗಂಜಿಯಂತೆ ಸಹ ಮಾಡಿ ಕುಡಿಯಬಹುದು.