ಮಧುಮೇಹ ಇತ್ತೀಚೆಗೆ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ. ಒಮ್ಮೆ ಮಧುಮೇಹ ಬಂದರೆ ಪ್ರತಿ ದಿನ ತಾವು ಸೇವಿಸುವ ಆಹಾರ, ಪಾನೀಯಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಮಧುಮೇಹಿಗಳು ಬೇಯಿಸಿದ ಆಹಾರಕ್ಕಿಂತ ಹಸಿ ತರಕಾರಿ, ಸೊಪ್ಪು, ಹಣ್ಣು ಹಾಗೂ ದ್ರವ ರೂಪದ ಆಹಾರ ಹೆಚ್ಚಾಗಿ ಸೇವಿಸಬೇಕು.
ಬೂದುಗುಂಬಳ, ಸೌತೆಕಾಯಿ, ಸೋರೆಕಾಯಿ ಇವು ಮಧುಮೇಹಿಗಳಿಗಾಗಿ ಇರುವ ಅತ್ಯುತ್ತಮ ತರಕಾರಿ.
ಪ್ರತಿ ದಿನ ಬೆಳಗ್ಗೆ ನಿಯಮಿತವಾಗಿ ಈ ಮೂರರಲ್ಲಿ ಒಂದು ತರಕಾರಿಯನ್ನು ತುರಿದು ಅದಕ್ಕೆ ಉಪ್ಪು ಹಾಗೂ ಕಾಳು ಮೆಣಸನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ನಂತರ ಸೋಸಿ ಒಂದು ಲೋಟ ಜ್ಯೂಸ್ ತಯಾರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದೇ ರೀತಿ ಮೂರು ತರಕಾರಿಗಳನ್ನು ದಿನಕ್ಕೆ ಒಂದಂತೆ ಪುನರಾವರ್ತಿಸಿ.
ಈ ಪಾನೀಯ ಕುಡಿದ ಒಂದು ಗಂಟೆಯ ನಂತರ ಉಪಹಾರ ಸೇವಿಸಬಹುದು. ಹಸಿ ತರಕಾರಿ ರಸ ಸೇವಿಸುವುದರಿಂದ ದೇಹದ ನಿರ್ಜಲೀಕರಣವನ್ನು ತಡೆಗಟ್ಟಬಹುದು. ಇಡೀ ದಿನ ಚೇತೋಹಾರಿಯಾಗಿ ಇರಬಹುದು.