
ಮಧುಮೇಹ ಬಂದ ಮೇಲೆ ಪಶ್ಚಾತಾಪ ಪಡುವ ಬದಲು ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕೆಲ ಮನೆಮದ್ದುಗಳ ಮೂಲಕ ಮಧುಮೇಹವನ್ನು ದೂರವಿಡಬಹುದು. ಚೀನಾದಲ್ಲಿ ಪ್ರಾಚೀನ ಕಾಲದಿಂದಲೂ ಮಧುಮೇಹ ನಿಯಂತ್ರಣಕ್ಕಾಗಿ ಈ ವಿಧಾನವನ್ನು ಬಳಸಲಾಗುತ್ತಿದೆ.
ಚೀನೀಗಳ ಪ್ರಕಾರ, ಮಧುಮೇಹವನ್ನು ಗುಣಪಡಿಸಲು ಮಾವಿನ ಎಲೆಗಳು ಅತ್ಯುತ್ತಮ ಔಷಧ. ಮಾವಿನ ಎಲೆಗಳು ಪೆಕ್ಟಿನ್, ಫೈಬರ್ ಮತ್ತು ವಿಟಮಿನ್ ಸಿ ನಂತಹ ಪೌಷ್ಟಿಕಾಂಶವನ್ನು ಹೊಂದಿವೆ. ಇದರಿಂದಾಗಿ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಸ್ತಮಾ ಮತ್ತು ಡಯಾಬಿಟೀಸ್ ಖಾಯಿಲೆಗೆ ಈ ಎಲೆಗಳು ಉತ್ತಮ ಔಷಧ.
ಸಂಶೋಧನೆಯ ಪ್ರಕಾರ ಮಾವಿನ ಎಲೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಹಿರಂಗಪಡಿಸಲಾಗಿದೆ. ಮಾವಿನ ಎಲೆಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸರಿಪಡಿಸುತ್ತವೆ. ಇದು ಕ್ರಮೇಣ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.