ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಆರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 468 ಮದ್ಯದ ಅಂಗಡಿಗಳ ಪರವಾನಿಗೆ ಜುಲೈ 31 ಕ್ಕೆ ಮುಕ್ತಾಯವಾಗಿರುವುದರಿಂದ ಇಂದಿನಿಂದ ಈ ಎಲ್ಲ ಅಂಗಡಿಗಳು ಬಂದ್ ಅಗಲಿವೆ.
ಇವುಗಳು ‘ಬಂದ್’ ಆದರೆ ಮದ್ಯದ ಕೊರತೆ ಉಂಟಾಗಬಹುದು ಎಂಬ ಕಾರಣಕ್ಕೆ ಆತಂಕಗೊಂಡ ಮದ್ಯ ಪ್ರಿಯರು ಖರೀದಿಗಾಗಿ ಮುಗಿಬಿದ್ದಿದ್ದಾರೆ. ವಾರಾಂತ್ಯದ ದಿನದಂದು ದೆಹಲಿಯ ಬಹುತೇಕ ಮದ್ಯದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಜನ ಖರೀದಿ ಮಾಡಿದ್ದಾರೆ.
ಇದರ ಪರಿಣಾಮ ಕೆಲವೊಂದು ಅಂಗಡಿಗಳಲ್ಲಿ ಖಾಲಿ ಆಗಿದ್ದು ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ಕೆಲವು ಕಡೆ ಬೇಕಾದ ಬ್ರಾಂಡ್ ಸಿಗದ ವೇಳೆ ಸಿಕ್ಕಿದ ಮದ್ಯವನ್ನೇ ಖರೀದಿ ಮಾಡಿಕೊಂಡು ಹೋಗಿದ್ದಾರೆ. ಪರವಾನಿಗೆ ಮುಗಿದಿರುವ ಮದ್ಯದ ಅಂಗಡಿಗಳು ಮಾತ್ರ ಬಂದ್ ಆಗುತ್ತಿದ್ದು, ಆದರೂ ಜನ ಮತ್ತೆ ಸಿಗುವುದಿಲ್ಲವೇನೋ ಎಂಬಂತೆ ಖರೀದಿ ಮಾಡಿದ್ದಾರೆ.