ಬಿಹಾರದ ಜೈಲುಗಳಲ್ಲೀಗ ಕುಡುಕರದ್ದೇ ಹಾವಳಿ. ಬಿಹಾರ ಸರ್ಕಾರ ಮದ್ಯಪಾನ ನಿಷೇಧ ಕಾನೂನನ್ನು ಜಾರಿಗೆ ತಂದ ಬೆನ್ನಲ್ಲೇ, ಕುಡುಕರ ಬಂಧನ ಹೆಚ್ಚಾಗಿತ್ತು. ಇದೇ ವಿಚಾರ ಸರ್ಕಾರ ಹಾಗೂ ಪ್ರತಿಪಕ್ಷಗಳ ಮಧ್ಯೆ ಜಟಾಪಟಿಗೂ ಕಾರಣವಾಗಿದೆ.
ಹಾಗಾಗಿಯೇ ಬಿಹಾರ ಸರ್ಕಾರವೀಗ ಕಾನೂನಿನಲ್ಲಿ ಕೊಂಚ ಬದಲಾವಣೆ ಮಾಡಿದೆ. ಸಾರ್ವಜನಿಕರು ಮದ್ಯಪಾನ ಮಾಡುವ ವೇಳೆ ಸಿಕ್ಕಿಬಿದ್ರೂ ಅವರನ್ನು ಜೈಲಿಗಟ್ಟೋದಿಲ್ಲ. ಬದಲಾಗಿ ಲಿಕ್ಕರ್ ಮಾಫಿಯಾ ಬಗ್ಗೆ ಅವರಿಂದ್ಲೇ ಬಾಯ್ಬಿಡಿಸ್ತಾರೆ.
ಈ ಬಗ್ಗೆ ಕರೆಕ್ಟಾಗಿ ಮಾಹಿತಿ ಕೊಟ್ರೆ ಜೈಲು ಶಿಕ್ಷೆಯಿಂದ ಬಚಾವ್ ಆಗ್ಬಹುದು. ಆರೋಪಿ ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ನಡೆಸೋ ಕಾರ್ಯಾಚರಣೆಯಲ್ಲಿ ಯಾರಾದ್ರೂ ಸಿಕ್ಕಿಬಿದ್ರೆ, ಆತನನ್ನು ಜೈಲು ಶಿಕ್ಷೆಯಿಂದ ಮುಕ್ತಗೊಳಿಸಲಾಗುತ್ತದೆ.
ಈ ಬಗ್ಗೆ ಸಭೆ ನಡೆಸಿ ಬಿಹಾರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಪೊಲೀಸರು ಹಾಗೂ ಇತರೆ ಸಿಬ್ಬಂದಿಗೂ ಹೊಸ ಆದೇಶಕ್ಕೆ ಸಂಬಂಧಪಟ್ಟಂತೆ ಮಾಹಿತಿ ರವಾನಿಸಿದೆ.