ಪುಣೆ: ಮದ್ಯಪಾನ ತ್ಯಜಿಸಿ, ಹಾಲು ಸೇವಿಸಿ ಎಂದು ವ್ಯಕ್ತಿಯೊಬ್ಬರು ವಿನೂತನವಾಗಿ ಜನರಿಗೆ ಕರೆನೀಡಿದ್ದಾರೆ. ರಾವಣನ ವೇಷ ಧರಿಸಿದ ಇವರು, ಹೊಸ ವರ್ಷಾಚರಣೆಯಂದು ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಾಲು ವಿತರಿಸಿ ಮದ್ಯಪಾನ ತ್ಯಜಿಸುವಂತೆ ಮನವಿ ಮಾಡಿದ್ದಾರೆ.
ಹಾಲು ಸೇವಿಸಿರಿ, ಮದ್ಯಪಾನ ಮಾಡಬೇಡಿ ಎಂಬ ಸಂದೇಶವನ್ನು ಹರಡುತ್ತಿರುವ ರಾವಣನ ವೇಷ ಧರಿಸಿದ ಅರುಣ್ ಓಹೆರ್, ಜನರು ತಮ್ಮೊಳಗಿನ ರಾವಣನನ್ನು ಬಿಡುಗಡೆ ಮಾಡಬೇಕು. ಮದ್ಯವನ್ನು ತ್ಯಜಿಸಿ ಹಾಲನ್ನು ಕುಡಿಯಬೇಕೆಂದು ಬಯಸುವುದಾಗಿ ಅವರು ಹೇಳಿದ್ದಾರೆ.
ಮಕ್ಕಳಿಗೆ ಮನೆಯಲ್ಲಿ ನೀಡಿ ಲೈಂಗಿಕ ಶಿಕ್ಷಣ
ಸಮಾಜದಲ್ಲಿ ಕುಡಿತದ ಚಟ ಹೆಚ್ಚುತ್ತಿದ್ದು, ಇದರಿಂದ ಹಲವು ಕುಟುಂಬಗಳು ಛಿದ್ರವಾಗುತ್ತಿವೆ. ಈ ಕಾರ್ಯಕ್ರಮದ ಮೂಲಕ ಮದ್ಯಪಾನ ತ್ಯಜಿಸುವಂತೆ ಜನರನ್ನು ಒತ್ತಾಯಿಸುತ್ತಿದ್ದೇವೆ ಎಂದು ಸ್ಥಳೀಯ ಮುಖಂಡರೊಬ್ಬರು ತಿಳಿಸಿದ್ದಾರೆ. ಹೊಸವರ್ಷದಂದು ಕುಡಿದು ಗಲಾಟೆ ಮಾಡದೆ, ಶಾಂತಿಯುತವಾಗಿ ಬರಮಾಡಿಕೊಳ್ಳಬೇಕು ಎಂದು ಅವರು ವಿನಂತಿಸಿದ್ದರು.