ಮದುವೆ ಸಮಾರಂಭಕ್ಕೆ ಹೀಗಿರಲಿ ‘ಆಭರಣ’ ಆಯ್ಕೆ 15-11-2022 6:30AM IST / No Comments / Posted In: Beauty, Latest News, Live News, Life Style ಸಂಗೀತ, ಮದುವೆ, ರಿಸೆಪ್ಷನ್ ಎಲ್ಲಾ ಸಮಾರಂಭಗಳೂ ಸಖತ್ ಸ್ಪೆಷಲ್. ಮದುವೆ ಕಾರ್ಯಕ್ರಮಗಳಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕು ಅನ್ನೋದು ಎಲ್ಲರ ಆಸೆ. ಅದಕ್ಕೆ ಸೂಕ್ತವಾದ ಉಡುಪು ಮಾತ್ರವಲ್ಲ, ಆಭರಣ ಕೂಡ ಬೇಕು. ಆಭರಣಗಳ ಆಯ್ಕೆಯಲ್ಲಿ ಎಡವಿದ್ರೆ ನಿಮ್ಮ ಸಂಪೂರ್ಣ ಲುಕ್ ಹಾಳಾಗಿ ಹೋಗುತ್ತೆ. ಆಭರಣಗಳ ಆಯ್ಕೆ ಸರಿಯಾಗಿದ್ರೆ ನಿಮ್ಮ ವ್ಯಕ್ತಿತ್ವಕ್ಕೂ ಹೊಸದೊಂದು ಕಳೆ ಬರುತ್ತೆ. ಅದ್ರಲ್ಲೂ ಮದುಮಗಳಿಗಂತೂ ಆಭರಣವೇ ಭೂಷಣ. ಬಂಗಾರ, ಪಚ್ಚೆ, ಹಸಿರು ರತ್ನದ ಆಭರಣಗಳು ವಧುವಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ನಿಮ್ಮ ಮದುವೆಯ ಉಡುಪು ಕೆಂಪು ಬಣ್ಣದ್ದಾಗಿದ್ದರೆ ಈ ಆಭರಣಗಳು ಅದಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ರಿಸೆಪ್ಷನ್ ನ ಸುಂದರ ಸಂಜೆಗಾಗಿ ಮದುಮಗಳಿಗೆ ವೈಟ್ ಗೋಲ್ಡ್ ಆಭರಣಗಳಿದ್ದರೆ ಚೆನ್ನ. ಸುತ್ತ ಮುತ್ತ ವಜ್ರ, ಮಧ್ಯದಲ್ಲಿ ದೊಡ್ಡದೊಂದು ಪಚ್ಚೆ ಇರುವ ಹಾರ ಆ ಸಮಾರಂಭಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಕಾಕ್ಟೈಲ್ ರಿಂಗ್ ಗಳನ್ನು ಕೂಡ ಧರಿಸಬಹುದು. ನೀಲಿ ಬಣ್ಣದ ಧಿರಿಸಿಗೆ ಹಸಿರು ಬಣ್ಣದ ಆಭರಣಗಳು ಸೂಟ್ ಆಗುತ್ತವೆ. ನೀಲಿ ಬಣ್ಣದ ರತ್ನಗಳಿರುವ ಹಸಿರು ಆಭರಣ ಕೂಡ ಚೆನ್ನ. ನೀಲಿ ಹಾಗೂ ಹಸಿರು ಬಣ್ಣದ ಕಾಂಬಿನೇಷನ್ ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ. ಹಸಿರು ಬಣ್ಣದ ರತ್ನಗಳಿರುವ ಆಭರಣ, ಕೆಂಪು, ಗುಲಾಬಿ, ಹಳದಿ ಮತ್ತು ನೀಲಿ ಬಣ್ಣದ ಸೀರೆ ಅಥವಾ ಇತರ ಮದುವೆ ಧಿರಿಸಿನ ಮೇಲೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ನೀಲಿ ರತ್ನಾಭರಣ ಕಪ್ಪು ಬಣ್ಣದ ಉಡುಪಿಗೂ ಚೆನ್ನಾಗಿ ಕಾಣುತ್ತದೆ. ಆಭರಣಕ್ಕೆ ತಕ್ಕಂತಹ ಉಡುಪುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಆಗ ಮಾತ್ರ ಮದುವೆಯ ಲುಕ್ ಪರ್ಫೆಕ್ಟ್ ಎನಿಸುತ್ತದೆ.