alex Certify ಮದುವೆ ಸಂಭ್ರಮದಲ್ಲಿ ಪರಸ್ಪರ ಬೆಂಕಿಹಚ್ಚಿಕೊಂಡ ವಧು-ವರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಂಭ್ರಮದಲ್ಲಿ ಪರಸ್ಪರ ಬೆಂಕಿಹಚ್ಚಿಕೊಂಡ ವಧು-ವರ….!

ಇತ್ತೀಚಿನ ದಿನಗಳಲ್ಲಿ ವಿವಾಹ ಸಂಪ್ರದಾಯಕ್ಕಿಂತ ಫೋಟೋಶೂಟ್‍ಗೆ ಮಹತ್ವ ಹೆಚ್ಚಾಗುತ್ತಿದೆ ಎಂದೆನಿಸುತ್ತಿದೆ. ವಧು-ವರರು ಕೂಡ ತಮ್ಮ ವಿವಾಹದ ಫೋಟೋ, ವಿಡಿಯೋಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ. ಹಿಂದೆಂದೂ ನೋಡಿರದ ಹೊಸ ಹೊಸ ಪರಿಕಲ್ಪನೆಗಳು ಬರುತ್ತಿವೆ. ಇದೀಗ ಇಂಥದ್ದೇ ವಿಶಿಷ್ಟ ವಿಡಿಯೋವೊಂದು ವೈರಲ್ ಆಗಿದೆ.

ಸ್ಟಂಟ್‌ಮ್ಯಾನ್ ಗೇಬ್ ಜೆಸ್ಸಾಪ್ ಮತ್ತು ಅಂಬಿರ್ ಬಾಂಬಿರ್ ಮಿಶೆಲ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಂಪ್ರಾದಾಯಿಕ ಮದುವೆ ಪ್ರವೇಶವನ್ನು ಇಷ್ಟಪಡದ ಅವರು, ಥ್ರಿಲ್ ಮತ್ತು ಸಸ್ಪೆನ್ಸ್‌ ರೀತಿಯಲ್ಲಿ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ.

ತಮ್ಮ ವಿವಾಹದ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡ ನಂತರ, ವಧು-ವರರು ಬೆಂಕಿ ಹಚ್ಚಿ ಫೋಟೋಶೂಟ್ ಮಾಡಿಸಿದ್ದಾರೆ. ಸಹಜವಾಗಿ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ವಿಭಿನ್ನ ಶೈಲಿಯ ಫೋಟೋಶೂಟ್ ಮಾಡಿಸಿದ್ದಾರೆ. ಮದುವೆಗೆ ಬಂದಿರೋ ಅತಿಥಿಗಳು ಅವರನ್ನು ಹುರಿದುಂಬಿಸುವಾಗ ಒಟ್ಟಿಗೆ ಕೈ-ಕೈ ಹಿಡಿದು ನಡೆದಿದ್ದಾರೆ. ಈ ಕ್ಷಣವನ್ನು ಛಾಯಾಗ್ರಾಹಕರು ಸೆರೆಹಿಡಿದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಸುಮಾರು 70,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಕೆಲವರು ಈ ವಿಡಿಯೋ ನೋಡಿ ಆಘಾತಕ್ಕೊಳಗಾಗಿದ್ದರೂ, ಇತರರು ಇಷ್ಟಪಟ್ಟಿದ್ದಾರೆ. ಇದು ನಿಜವಾಗಿಯೂ ಅದ್ಭುತವಾಗಿದ್ದು, ತಾನು ಫೋಟೋ ನೋಡಲು ಎದುರುನೋಡುತ್ತಿರುವುದಾಗಿ ಬಳಕೆದಾರರು ಬರೆದಿದ್ದಾರೆ. ಇನ್ನು ಹಲವರು ಮಂತ್ರಮುಗ್ಧಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...