ಹಿಂದೂ ಸಮಾಜದಲ್ಲಿ ಮದುವೆಗೆ ವಿಶೇಷ ಮಹತ್ವವಿದೆ. ಮುಹೂರ್ತ, ಶುಭ ಗಳಿಗೆ ನೋಡಿ ಮದುವೆ ಮಾಡಿಸಲಾಗುತ್ತದೆ. ಮದುವೆಯಂತಹ ಶುಭ ಸಂದರ್ಭದಲ್ಲಿ ಮಳೆ ಬರದಿರಲಿ ಎನ್ನುವ ಕಾರಣಕ್ಕೆ ಹರಕೆ ಹೊತ್ತುಕೊಳ್ಳುವವರಿದ್ದಾರೆ. ಮದುವೆ ದಿನ ಮಳೆ ಬಂದ್ರೆ ಕೆಲವರು ಶುಭವೆಂದ್ರೆ ಮತ್ತೆ ಕೆಲವರು ಅಶುಭವೆನ್ನುತ್ತಾರೆ.
ಮದುವೆ ದಿನ ಮಳೆಯಾದ್ರೆ ಅದನ್ನು ದೇವರ ಆಶೀರ್ವಾದ ಎನ್ನಲಾಗುತ್ತದೆ. ಇದು ಮಂಗಳಕರವೆಂದು ಕೆಲವರು ನಂಬಿದ್ದಾರೆ. ಮಳೆ ಬಂದ್ರೆ ಭೂಮಿಗೆ ಎಷ್ಟು ಒಳ್ಳೆಯದೋ ಅದೇ ರೀತಿ ಮದುವೆಯಲ್ಲಿ ಮಳೆ ಬಂದ್ರೂ ಅಷ್ಟೆ ಒಳ್ಳೆಯದು. ಬಂಜರು ಭೂಮಿಗೆ ಮಳೆ ಬಿದ್ರೆ ಹೇಗೆ ಫಸಲು ಬೆಳೆಯುತ್ತದೆಯೋ ಅದೇ ರೀತಿ ಮದುವೆಯಲ್ಲಿ ಮಳೆ ಬಿದ್ರೆ ಭಗವಂತ ಆಶೀರ್ವಾದ ಮಾಡಿದ್ದಾನೆ ಎಂದರ್ಥ. ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ ಎಂದರ್ಥ.
ಮದುವೆ ವೇಳೆ ಮಳೆ ಬಿದ್ರೆ ಅದು ಸಮೃದ್ಧಿಯ ಸೂಚಕ. ದೈಹಿಕ ಹಾಗೂ ಮಾನಸಿಕವಾಗಿ ದಂಪತಿ ಆರೋಗ್ಯ ಹಾಗೂ ಸುಖಕರವಾಗಿರುತ್ತಾರೆ ಎಂದರ್ಥ.
ಪತಿ – ಪತ್ನಿ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ದಾಂಪತ್ಯ ಸುಖಕರ, ಮಂಗಳಕರವಾಗಿರುತ್ತದೆ ಎಂದರ್ಥ.