ಸರ್ಕಾರಗಳು ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹದಂತಹ ಪಿಡುಗುಗಳು ವರದಿಯಾಗುತ್ತಲೇ ಇವೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಇಂತಹ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. 11 ನೇ ತರಗತಿ ವಿದ್ಯಾರ್ಥಿನಿಯನ್ನು ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗಿದೆ. ಅದೂ ಸಹ ಮದುವೆ ವೇಳೆಗೆ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಮೋಹನ್ ಎಂಬುವರು ಐವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಜೋಸ್ಫೈನ್ ಫಿಲೋಮಿನ್, ಧರ್ಮರಾಜ್, ಮಹೇಶ್ ಮತ್ತು ಧರ್ಮರಾಜನ ಪತ್ನಿ ಮತ್ತು ಸಂಜೀವಿರಾಜ್ ವಿರುದ್ಧ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ದೂರು ದಾಖಲಾಗಿದೆ.
ಈ ವಿದ್ಯಾರ್ಥಿನಿ ಅಮ್ಮಪೆಟ್ಟೈನ ಸರ್ಕಾರಿ ಶಾಲೆಯಲ್ಲಿ 11 ನೇ ತರಗತಿ ಓದುತ್ತಿದ್ದಳು. ಆಕೆಯ ಸಹಮತಿ ಪಡೆಯದೇ ಒತ್ತಾಯಪೂರ್ವಕವಾಗಿ ಸಂಜೀವಿರಾಜ್ ಗೆ ಕೊಟ್ಟು ಮದುವೆ ಮಾಡಲಾಗಿದೆ. ವಿದ್ಯಾರ್ಥಿನಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.