alex Certify ಮದುವೆ ವಿಳಂಬವಾಗುವುದರ ಹಿಂದೆ ಇವೆ ಹಲವು ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ವಿಳಂಬವಾಗುವುದರ ಹಿಂದೆ ಇವೆ ಹಲವು ಕಾರಣ

25 ರಿಂದ 30 ವರ್ಷ ಮದುವೆಗೆ ಸರಿಯಾದ ವಯಸ್ಸು. ಕೆಲವೊಮ್ಮೆ ಎಷ್ಟೇ ಹುಡುಕಾಡಿದ್ರೂ ನೀವು ಬಯಸಿದ ಸಂಗಾತಿ ಸಿಗುವುದೇ ಇಲ್ಲ. ಮದುವೆಯಾಗುವ ಇಚ್ಛೆಯಿದ್ದರೂ ಒಳ್ಳೆಯ ಸಂಬಂಧಗಳು ಸಿಗದೇ ವಿಳಂಬವಾಗುತ್ತದೆ. ಈ ರೀತಿ ಮದುವೆ ತಡವಾಗುವುದರ ಹಿಂದೆ ಹಲವು ಕಾರಣಗಳಿವೆ.

ಅನೇಕ ಬಾರಿ ಯುವಕ – ಯುವತಿಯರು, ಬ್ರೇಕಪ್‌ ಆದ ತಕ್ಷಣ ಮದುವೆ ನಿರ್ಧಾರ ತೆಗೆದುಕೊಳ್ತಾರೆ. ಇದು ನೀವು ಮಾಡುವ ಮೊದಲನೆಯ ತಪ್ಪು. ಲವ್‌ ಫೇಲ್ಯೂರ್‌ ನಂತರ ಒಂಟಿತನ ದೂರ ಮಾಡಲು ಮದುವೆಯೇ ಪರಿಹಾರ ಎಂದುಕೊಳ್ಳಬೇಡಿ. ನೀವು ಮದುವೆಗೆ ಸಿದ್ಧರಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಮದುವೆ ಅನ್ನೋದು ಜೀವನ ಪರ್ಯಂತ ನಿಭಾಯಿಸಬೇಕಾದ ಸಂಬಂಧ.

ಕೆಲವೊಮ್ಮೆ ಮದುವೆ ವಿಳಂಬವಾಗಲು ಗ್ರಹಗತಿಗಳ ಕಾರಣವೂ ಇರಬಹುದು. ಈ ಬಗ್ಗೆ ಜ್ಯೋತಿಷಿಗಳು ಅಥವಾ ನಿಮ್ಮ ಕುಟುಂಬದ ಪುರೋಹಿತರ ಜೊತೆ ಚರ್ಚಿಸಿ. ಅವರೇನಾದರೂ ಪರಿಹಾರ ಮಾರ್ಗಗಳನ್ನು ಸೂಚಿಸಿದ್ರೆ ಬೇಗ ಮದುವೆಯಾಗುವ ಸಾಧ್ಯತೆ ಇರುತ್ತದೆ. ಕಾಲ ಎಷ್ಟೇ ಬದಲಾದ್ರೂ ಮುಖ ನೋಡಿ ಮಣೆ ಹಾಕುವ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ.

ಸುಂದರ ಹುಡುಗಿಯೇ ಬೇಕು ಎಂದು ಎಲ್ಲರೂ ಆಸೆಪಡ್ತಾರೆ. ತನ್ನ ಅರ್ಹತೆಗನುಗುಣವಾಗಿರುವ ಸಂಗಾತಿಯನ್ನು ಅರಸುವುದಿಲ್ಲ. ಇದರಿಂದಾಗಿಯೂ ಮದುವೆ ತಡವಾಗಬಹುದು. ಮದುವೆ ವಿಚಾರದಲ್ಲಿ ನಿರಾಕರಣೆಗಳು ಸರ್ವೇಸಾಮಾನ್ಯ. ನೋಡಿದವರೆಲ್ಲ ನಮ್ಮನ್ನು ಒಪ್ಪಿಕೊಳ್ಳಬೇಕೆಂಬ ನಿಯಮವಿಲ್ಲ. ಅದೇ ರೀತಿ ನೀವು ಕೂಡ ನೋಡಿದ ತಕ್ಷಣ ಅವರನ್ನೇ ಮದುವೆಯಾಗಬೇಕೆಂಬ ನಿಯಮವಿಲ್ಲ. ಎಲ್ಲರಿಗೂ ಸಾಕಷ್ಟು ಆಯ್ಕೆಗಳಿರುವುದರಿಂದ ನಿರಾಕರಣೆಗೆ ಸಜ್ಜಾಗಿಯೇ ಇರಬೇಕು. ಪದೇ ಪದೇ ಈ ರೀತಿ ಅನುಭವಗಳಾದಾಗ ಕೆಲವರು ಮದುವೆಯ ನಿರ್ಧಾರದಿಂದಲೇ ಹಿಂದೆ ಸರಿಯುವ ಸಾಧ್ಯತೆ ಇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...