
ವಾಸ್ತುಶಾಸ್ತ್ರ ಒಂದು ವಿಜ್ಞಾನ. ಅದು ಪ್ರತಿಯೊಬ್ಬರ ಜೀವನದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಸುತ್ತಮುತ್ತಲ ಶಕ್ತಿ ಅನುಕೂಲವಾಗಿದ್ದರೆ ವ್ಯಕ್ತಿಗೆ ಪ್ರಗತಿಯಾಗುತ್ತದೆ. ಸುತ್ತಮುತ್ತಲ ಶಕ್ತಿ ಪ್ರತಿಕೂಲವಾಗಿದ್ದರೆ ಅದು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮದುವೆ ಹಾಗೂ ವಾಸ್ತುವಿಗೂ ಸಂಬಂಧವಿದೆ. ಮದುವೆ ವಯಸ್ಸಿನಲ್ಲಿ ಪುರುಷರು ಮಾಡುವ ಕೆಲವೊಂದು ಕೆಲಸ ಅವ್ರ ಮದುವೆ ಮೇಲೆ ಪ್ರಭಾವ ಬೀರುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಮದುವೆ ವಯಸ್ಸಿಗೆ ಬಂದ ಹುಡುಗ್ರು ದಕ್ಷಿಣ ಅಥವಾ ನೈರುತ್ಯ ದಿಕ್ಕಿಗೆ ತಲೆಯಿಟ್ಟು ಮಲಗಬಾರದು. ಇದು ಮದುವೆ ಸಂಬಂಧಕ್ಕೆ ಅಡ್ಡಿಯುಂಟು ಮಾಡುತ್ತದೆ.
ಮದುವೆ ವಯಸ್ಸಿಗೆ ಬಂದ ಹುಡುಗ್ರು ಕಪ್ಪು ಬಣ್ಣದ ಬಟ್ಟೆ ಹಾಗೂ ವಸ್ತುವನ್ನು ಬಳಸಬಾರದು.
ಒಂದಕ್ಕಿಂತ ಹೆಚ್ಚು ಬಾಗಿಲು ಅಥವಾ ಕಿಟಕಿಯಿರುವ ಕೋಣೆಯಲ್ಲಿ ಮಲಗಬೇಕು. ಕತ್ತಲಿರುವ, ಕಡಿಮೆ ಗಾಳಿ ಬರುವ ಕೋಣೆಯಲ್ಲಿ ಮಲಗಬಾರದು.
ಮಲಗುವ ಕೋಣೆಯ ಗೋಡೆ ಬಣ್ಣ ಗಾಢವಾಗಿರಬಾರದು. ಪ್ರಕಾಶಮಾನವಾದ, ಹಳದಿ, ಗುಲಾಬಿ ಬಣ್ಣದ ಗೋಡೆ ಶುಭಕರವಾಗಿರುತ್ತದೆ.
ಕೋಣೆಯಲ್ಲಿ ಇನ್ನೊಬ್ಬರು ಮಲಗುತ್ತಿದ್ದರೆ ಕೋಣೆ ಬಾಗಿಲು ಹತ್ತಿರವಿರುವ ಜಾಗದಲ್ಲಿ ನೀವು ಮಲಗಿ.