ಮದುವೆ ಮೆರವಣಿಗೆಯಲ್ಲಿ ವರ ಹಾಗೂ ಸಂಬಂಧಿಕರು ಉತ್ಸಾಹದಿಂದ ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ, ಮೆರವಣಿಗೆಯಲ್ಲಿ ವಧು ನೃತ್ಯ ಮಾಡುವುದು ತೀರಾ ಕಮ್ಮಿ. ಆದರೆ, ಇಲ್ಲೊಬ್ಬಳು ವಧು ತಾನ್ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾಳೆ. ಈ ವಿಡಿಯೋ ನೋಡಿದ್ರೆ ಖಂಡಿತಾ ನೀವು ಕ್ಲೀನ್ ಬೋಲ್ಡ್ ಆಗುತ್ತೀರಿ..
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ಇಂದರ್‌ಪ್ರೀತ್ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆಯುಷಿ ಎಂದು ಗುರುತಿಸಲ್ಪಟ್ಟ ವಧು ತನ್ನ ಮದುವೆಯ ಮೆರವಣಿಗೆಯಲ್ಲಿ ಬೊಂಬಾಟ್ ಆಗಿ ಕುಣಿದಿದ್ದಾಳೆ. ಸುಂದರವಾಗಿ ಅಲಂಕೃತಗೊಂಡ ಚಿನ್ನದ ಬಣ್ಣದ ಲೆಹೆಂಗಾವನ್ನು ಧರಿಸಿರುವ ಆಯುಷಿ, ಧೋಲ್‌ನ ಆಕರ್ಷಕ ಬೀಟ್‌ಗಳಿಗೆ ಭಾಂಗ್ರಾ ಹೆಜ್ಜೆಯಿಟ್ಟಿದ್ದಾರೆ. ಆಕೆ ತನ್ನ ಬಾಯಿಯಲ್ಲಿ ಕರೆನ್ಸಿ ನೋಟನ್ನು ಕೂಡ ತುಂಬಿಕೊಂಡು ಉತ್ಸಾಹದಿಂದ ನೃತ್ಯ ಮಾಡಿದ್ದಾಳೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಈ ವಿಡಿಯೋ 2.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಭಾರಿ ಗಾತ್ರದ ಲೆಹೆಂಗಾ ಧರಿಸಿದ್ದರೂ ಕೂಡ ವಧುವು ಯಾವುದೇ ಅಳುಕಿಲ್ಲದೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ವಧುವಿನ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.