ಮದುವೆ ಮಾಡಿಸುವಂತೆ ಹಾಗೂ ಆಸ್ತಿ ಹಂಚಿಕೆ ಮಾಡಿಕೊಡುವಂತೆ ತನ್ನ ಹಿರಿಯ ಸಹೋದರನಿಗೆ ದುಂಬಾಲು ಬಿದ್ದರೂ ಕಿವಿಗೊಡಲಿಲ್ಲ ಎಂಬ ಕಾರಣಕ್ಕೆ ಆತನನ್ನು ತಮ್ಮನೇ ಇರಿದು ಕೊಂದಿದ್ದಾನೆ. ಇಂತಹದೊಂದು ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕುಷ್ಟಗಿ ತಾಲೂಕಿನ ಪಟ್ಟಲ ಚಿಂತಿ ಗ್ರಾಮದ ಯಮನೂರಪ್ಪ ಕಡಿವಾಲ ಮೃತ ವ್ಯಕ್ತಿಯಾಗಿದ್ದು, ಆತನನ್ನು ಸಹೋದರ ಮಲ್ಲಪ್ಪ ಕಡಿವಾಲ ಗುರುವಾರ ರಾತ್ರಿ ಹತ್ಯೆ ಮಾಡಿದ್ದಾನೆ.
ಮಲ್ಲಪ್ಪ ತನ್ನ ಸಹೋದರ ಯಮನೂರಪ್ಪನಿಗೆ ತನಗೆ ಮದುವೆ ಮಾಡಿಸುವುದರ ಜೊತೆಗೆ ಆಸ್ತಿ ಹಂಚಿಕೆ ಮಾಡಿಕೊಡುವಂತೆ ಕೇಳಿದ್ದು, ಇದನ್ನು ಆತ ಮುಂದೂಡುತ್ತಾ ಬಂದಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಮಲ್ಲಪ್ಪ ಚಾಕುವಿನಿಂದ ಇರಿದು ಕೊಲೆಗೈದಿದ್ದು, ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.