
ಹೌದು, ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸುಮನ್ ರಸ್ತೋಗಿ ಎಂಬುವವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪೇಟಿಎಂ ಮೂಲಕ ಧೋಲ್ ನುಡಿಸುವ ವ್ಯಕ್ತಿಗೆ ಹಣ ಕಳುಹಿಸುವುದನ್ನು ಕಾಣಬಹುದು. ಆ ವ್ಯಕ್ತಿಯು ಶಾಸ್ತ್ರೋಕ್ತವಾಗಿ ವರನ ತಲೆಯ ಸುತ್ತ ತನ್ನ ಫೋನ್ ಅನ್ನು ಸುತ್ತಿದ್ದಾನೆ. ನಂತರ ಬಾರಾತ್ನಲ್ಲಿ ಧೋಲ್ ವಾಲಾ ಅಂಟಿಸಿದ್ದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಕಳುಹಿಸಲು ಮುಂದಾಗಿದ್ದಾನೆ.
ಬಿಹಾರದಲ್ಲಿ ಮದುವೆಯೊಂದರಲ್ಲಿ ಈ ದೃಶ್ಯ ಕಂಡು ಬಂದಿದೆ ಎಂದು ತಿಳಿದುಬಂದಿದೆ. ತಂತ್ರಜ್ಞಾನವನ್ನು ಹೇಗೆ ಬಳಸುವುದು ಎಂಬುದು ಭಾರತೀಯರಿಗೆ ಮಾತ್ರ ಚೆನ್ನಾಗಿ ತಿಳಿದಿದೆ ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.