ಆತ್ಮೀಯ ಸ್ನೇಹಿತರ ಮದುವೆ ಅಂದ್ರೆ ಎಲ್ರಿಗೂ ಖುಷಿ, ಮದ್ವೆ ಮನೆಯಲ್ಲಿ ಸಡಗರದಿಂದ ಓಡಾಡುವುದೇ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಸ್ನೇಹಿತರ ಮದುವೆಯಲ್ಲಿ ನಾವೂ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯ. ಸಮಾರಂಭದಲ್ಲಿ ಎಲ್ಲರ ದೃಷ್ಟಿ ನಿಮ್ಮತ್ತ ನೆಟ್ಟಿರಬೇಕು, ಅಷ್ಟು ಸುಂದರವಾಗಿ ಕಾಣಬೇಕೆಂದ್ರೆ ಈ ಸರಳ ಸಲಹೆಗಳನ್ನು ತಪ್ಪದೇ ಪಾಲಿಸಿ.
ಜಾಕೆಟ್ ಸ್ಟೈಲ್ : ಜಾಕೆಟ್ ಈಗಿನ ಲೇಟೆಸ್ಟ್ ಟ್ರೆಂಡ್. ಅದನ್ನು ಬೇರೆ ಬೇರೆ ರೀತಿಯಾಗಿ ಬಳಸಿಕೊಳ್ಳಬಹುದು. ಜಾಕೆಟ್ ಗೆ ಹೊಂದಿಕೆಯಾಗುವಂತಹ ಲೆಹಂಗಾ ಚೋಲಿ ಅಥವಾ ಪಲಾಝೋವನ್ನು ನೀವು ಧರಿಸಬಹುದು. ವೆಲ್ವೆಟ್ ಅಥವಾ ಜರ್ದೋಸಿ, ಎಂಬ್ರಾಯಡರಿ ಇರುವ ಅಂದದ ಜಾಕೆಟ್ ಆರಿಸಿಕೊಳ್ಳಿ. ಉದ್ದಕ್ಕಿರಲಿ, ಗಿಡ್ಡಕ್ಕಿರಲಿ, ಓಪನ್ ಅಥವಾ ಕ್ಲೋಸ್, ಹೇಗಿದ್ರೂ ಚೆನ್ನಾಗಿ ಕಾಣುತ್ತದೆ.
ವಿಸ್ತ್ರತ ಚೋಲಿ : ನೆಟ್ ಅಥವಾ ಲೇಸ್ ಕೂರಿಸಿ ಚೋಲಿಯನ್ನು ನೀವು ಎಕ್ಸ್ ಟೆಂಡ್ ಮಾಡಿಸಬಹುದು. ಲೆಹಂಗಾದ ಮೇಲೆಯೇ ಇದ್ರೂ ಚೆನ್ನ. ಜಾಕೆಟ್ ಗಳ ಮೇಲೆ ಅಂದದ ಕ್ರಿಸ್ಟಲ್ ಅಥವಾ ಕನ್ನಡಿಗಳನ್ನು ಹಾಕಿ ಡಿಸೈನ್ ಮಾಡಿದ್ರೆ ಅದ್ಭುತವಾಗಿರುತ್ತದೆ.
ಟ್ರಯಲ್ : ಮದುವೆ ದಿನವೇ ನಿಮ್ಮ ಹೊಸ ಲೆಹಂಗಾ ಚೋಲಿಯನ್ನು ಟ್ರೈ ಮಾಡಲು ಹೋಗಬೇಡಿ. ಮದುವೆಗೂ ಮುನ್ನವೇ ಒಮ್ಮೆ ಅದನ್ನು ಟ್ರೈ ಮಾಡಿ. ಫಿಟ್ಟಿಂಗ್ ಸರಿಯಾಗಿದ್ಯಾ, ನಿಮಗೆ ಚೆನ್ನಾಗಿ ಒಪ್ಪುತ್ತಿದ್ಯಾ ಅನ್ನೋದನ್ನು ಚೆಕ್ ಮಾಡಿಕೊಳ್ಳಿ. ಟ್ರಯಲ್ ನಿಮ್ಮ ಲೆಹಂಗಾಕ್ಕೆ ರಿಚ್ ನೆಸ್ ಮತ್ತು ಗ್ಲಾಮರ್ ಕೊಡುತ್ತದೆ.
ಕಂಟೆಂಪರರಿ ಸ್ಟೈಲ್ : ಧೋತಿ ಪ್ಯಾಂಟ್, ಕೇಪ್ಸ್, ಪಲಾಝೋ, ಕ್ರಾಪ್ ಟಾಪ್ ಗಳನ್ನು ಟ್ರೈ ಮಾಡಿ.
ಸಹಜತೆ, ಲಯ : ನಿಮ್ಮ ಡ್ರೆಸ್ ಮತ್ತು ಅದರ ವಿನ್ಯಾಸ ಎಷ್ಟು ಮುಖ್ಯವೋ ಅದರ ಬಣ್ಣ ಕೂಡ ಅಷ್ಟೇ ಮುಖ್ಯ. ಆದಷ್ಟು ನೈಸರ್ಗಿಕ ಬಣ್ಣಗಳನ್ನು ಆಯ್ದುಕೊಳ್ಳಿ. ಹಸಿರು, ಪುದೀನಾ ಹಸಿರು ಹೀಗೆ ಬ್ರೈಟ್ ಕಲರ್ ಗಳಿಗೆ ಆದ್ಯತೆ ಕೊಡಿ. ಲೇಟೆಸ್ಟ್ ಹೇರ್ ಕಲರ್, ನೇಲ್ ಪೇಂಟ್, ಲಿಪ್ ಸ್ಟಿಕ್ ಟ್ರೆಂಡ್ ಗಮನದಲ್ಲಿರಲಿ.
ಫ್ಲೋರ್ ಸ್ವೀಪಿಂಗ್ ಫ್ಯಾಂಟಸಿ : ಭಾರತೀಯ ಆವೃತ್ತಿಯ ಸ್ವೀಪಿಂಗ್ ಗೌನ್ ಗಳು ಕೂಡ ಮದುವೆಗೆ ಹೇಳಿ ಮಾಡಿಸಿದಂತಿರುತ್ತವೆ. ಫ್ಲೋರ್ ಲೆಂತ್ ನ ಅನಾರ್ಕಲಿ ಬೆಸ್ಟ್.
ಸರಳತೆ : ಅತಿಯಾದ ಡ್ರೆಸ್ಸಿಂಗ್ ಬೇಡ. ಆಡಂಬರವಿಲ್ಲದೆ ಸದಭಿರುಚಿಯ ಸೊಬಗಿದ್ದರೆ ಸಾಕು. ಆಫ್ ಶೋಲ್ಡರ್ ಫ್ಲೋರಲ್ ಮ್ಯಾಕ್ಸಿ ಡ್ರೆಸ್, ಸಾಂಪ್ರದಾಯಿಕ ಜಾರ್ಜೆಟ್ ಸೀರೆಯಲ್ಲಿ ನೀವು ಸಖತ್ತಾಗಿ ಮಿಂಚಬಹುದು.