ಮದುವೆ ಅಂದ್ರೆ ಸಂಭ್ರಮ. ಅದು ಕೇವಲ ಗಂಡು-ಹೆಣ್ಣಿನ ಬಂಧನವಲ್ಲ. ಎರಡು ಕುಟುಂಬಗಳ ನಡುವಿನ ಸಂಬಂಧ. ಇತ್ತೀಚಿನ ದಿನಗಳಲ್ಲಂತೂ ಮದುವೆ ಅಂದ್ರೆ ಅಲ್ಲಿ ಭರ್ಜರಿ ಸಂಗೀತ, ಡಾನ್ಸ್ ಇರಲೇಬೇಕು. ಎರಡು ಕುಟುಂಬದ ಸದಸ್ಯರು ಸಂತೋಷವಾಗಿ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡುತ್ತಾರೆ. ಇತ್ತೀಚೆಗೆ ಸೊಶಿಯಲ್ ಮೀಡಿಯಾದಲ್ಲಿ ಅಂತಹದ್ದೆ ಒಂದು ಡಾನ್ಸಿಂಗ್ ವಿಡಿಯೋ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ಮಿಂಚಿದ್ದು ಅತ್ತಿಗೆ ಮತ್ತು ಮೈದುನನ ಬಿಂದಾಸ್ ಡಾನ್ಸ್.
ಅತ್ತಿಗೆಗೆ ಮೈದುನ ಒಳ್ಳೆಯ ಸ್ನೇಹಿತನಾಗಿರುತ್ತಾನೆ. ಆತನ ಜೊತೆ ಹರಟೆ, ತಮಾಷೆ ಇದ್ದೇ ಇರುತ್ತೆ. ಆದರೆ ಇಲ್ಲಿ ಮೈದುನ ಮತ್ತು ಅತ್ತಿಗೆ ಹೇಗೆ ಒಬ್ಬರಿಗೊಬ್ಬರು ಸವಾಲು ಹಾಕುವಂತೆ ಸ್ಪೆಪ್ಸ್ ಹಾಗಿದ್ದಾರೆ. ಮದುವೆ ಮನೆಯಲ್ಲಿ ಇದ್ದವರೆಲ್ಲರೂ ಈ ಅತ್ತಿಗೆ – ಮೈದುನರ ಡಾನ್ಸ್ ನೋಡಿ ದಂಗಾಗಿ ಹೋಗಿದ್ದರು.
ಅತ್ತಿಗೆ ಮತ್ತು ಮೈದುನನ ಈ ಡಾನ್ಸ್ ನೋಡಿ ಅಲ್ಲಿದ್ದವರೆಲ್ಲರೂ ಎಂಜಾಯ್ ಮಾಡಿದ್ದರು. ನೃತ್ಯಕ್ಕೆ ತಕ್ಕಂತೆ ಅಲ್ಲಿ ಹಾಡು ಕೂಡಾ ಹಾಕಲಾಗಿತ್ತು ‘ ಮೇ ನಯಿ ನವೇಲಿ ಆಯಿ’ ಅನ್ನೋ ಗುಜರಾತಿ ಹಾಡು ಅದಾಗಿತ್ತು. ಮನೆಗೆ ಬಂದ ನವ ವಧು ಹೇಗೆಲ್ಲ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಾಳೆ ಅನ್ನೋದು ಆ ಹಾಡಿನ ಅರ್ಥವಾಗಿತ್ತು. ಈ ಡಾನ್ಸ್‌ನ ವಿಡಿಯೋವನ್ನ ಅಂಕಿತ್ ಜಂಗಿದ್ ಅನ್ನುವರು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನ ಯೂಟ್ಯೂಬ್‌ನಲ್ಲಿ ಈಗಾಗಲೇ 44 ಲಕ್ಷ ಜನರು ವೀಕ್ಷಿಸಿದ್ದಾರೆ. ನೆಟ್ಟಿಗರು ಕಾಮೆಂಟ್ ಬಾಕ್ಸ್‌ಲ್ಲಿ ಅತ್ತಿಗೆ – ಮೈದುನರ ಈ ಬಾಂಧವ್ಯವನ್ನ ನೋಡಿ ಹಾಡಿ ಹೊಗಳಿದ್ದಾರೆ.