ಇತ್ತೀಚೆಗೆ ದೇಸಿ ಮದುವೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿದೆ. ವಧು ಮತ್ತು ವರರ ನಡುವಿನ ಹೃದಯಸ್ಪರ್ಶಿ ಪ್ರಣಯ ಕ್ಷಣಗಳು, ಮನರಂಜನಾ ನೃತ್ಯ ಪ್ರದರ್ಶನಗಳು ಇತ್ಯಾದಿ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಇದೀಗ ಹಾಸ್ಯನಟ ಮತ್ತು ನಟ ಸುನಿಲ್ ಗ್ರೋವರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನವಜೋಡಿಯು ವಿವಾಹ ಮಂಟಪದಲ್ಲೇ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ 3.8 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜಯಮಾಲಾ (ಪರಸ್ಪರ ಹಾರ ಬದಲಾಯಿಸುವ) ಸಮಾರಂಭ ಮುಗಿದ ನಂತರ ವಧು-ವರರು ವೇದಿಕೆಯ ಮೇಲೆ ನಿಂತಿದ್ದರು. ಈ ವೇಳೆ ವಧು, ವರನಿಗೆ ಸಿಹಿ ತಿಂಡಿ ನೀಡುತ್ತಾ, ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ವರ ಫೋಟೋಗೆ ಪೋಸ್ ನೀಡುತ್ತಾ ನಿಂತಿದ್ದು, ತಿಂಡಿಯನ್ನು ತಿನ್ನುವ ಉಸಾಬರಿಗೆ ಹೋಗಿಲ್ಲ.
ಮೊದಲು ಕೈಯಲ್ಲಿ ಮಿಠಾಯಿ ತುಂಡನ್ನು ಹಿಡಿದು ಕಾಯುತ್ತಿರುವ ವಧು, ವರ ತನ್ನತ್ತ ಗಮನ ಹರಿಸುತ್ತಿಲ್ಲ ಎಂದು ಸಿಟ್ಟಾಗಿದ್ದಾಳೆ. ಕೋಪಗೊಂಡ ವಧು, ತಿಂಡಿಯನ್ನು ಆತನ ಮುಖಕ್ಕೆ ಮೆತ್ತಿದ್ದಾಳೆ. ಇದರಿಂದ ಕ್ರೋಪೋದಿಕ್ತನಾದ ವರ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ತನ್ನ ಕೆನ್ನೆಗೆ ಬಾರಿಸಿದ್ದಕ್ಕೆ ಸಿಟ್ಟಾದ ವಧು ಕೂಡ ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಇದು ಪರಸ್ಪರ ಕಪಾಳಮೋಕ್ಷ ಮಾಡುವುದು ಮುಂದುವರೆದಿದೆ. ಬಂದಿರೋ ಅತಿಥಿಗಳು ಮಾತ್ರ ಏನು ಮಾಡಬೇಕು ಎಂಬುದನ್ನು ತಿಳಿಯದೆ ಮೂಕವಿಸ್ಮಿತರಾಗಿದ್ದಾರೆ. ಅಲ್ಲಿಗೆ ವಿಡಿಯೋ ಕೊನೆಗೊಂಡಿದೆ. ಆದರೆ, ಮುಂದೇನಾಯ್ತು ಎಂಬ ಬಗ್ಗೆ ತಿಳಿದಿಲ್ಲ.
https://www.youtube.com/watch?v=hkHZcjvq_NE