ಮದುವೆ ನಂತ್ರ ಹುಡುಗ-ಹುಡುಗಿ ಇಬ್ಬರ ಬಾಳಿನಲ್ಲಿಯೂ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಮದುವೆ ನಂತ್ರ ಪರಸ್ಪರ ಹೊಂದಾಣಿಕೆ ಹಾಗೂ ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ದಂಪತಿ ಮಾಡುವ ಸಣ್ಣ-ಪುಟ್ಟ ತಪ್ಪುಗಳು ಗೊತ್ತಿಲ್ಲದೆ ಮನಸ್ಸು ಮುರಿಯಲು ಕಾರಣವಾಗುತ್ತದೆ. ಹಾಗಾಗಿ ಮದುವೆ ನಂತ್ರ ಸಂಗಾತಿ ಬಳಿ ಅಪ್ಪಿತಪ್ಪಿಯೂ ಈ ವಿಷ್ಯಗಳನ್ನು ಹಂಚಿಕೊಳ್ಳಬೇಡಿ.
ಮದುವೆ ಖರ್ಚು : ಮದುವೆ ಎಂದ್ಮೇಲೆ ಖರ್ಚು ಸಾಮಾನ್ಯ. ಮದುವೆಗೆ ಇಷ್ಟು ಖರ್ಚಾಯ್ತು, ಅಷ್ಟು ಖರ್ಚಾಯ್ತು ಎಂದು ಸಂಗಾತಿ ಮುಂದೆ ಎಂದೂ ಹೇಳಲು ಹೋಗಬೇಡಿ. ಇದು ಸಂಗಾತಿ ಮನಸ್ಸನ್ನು ಘಾಸಿಗೊಳಿಸುವ ಸಾಧ್ಯತೆಯಿರುತ್ತದೆ.
ಮಾಜಿ ಸಂಗಾತಿ ಬಗ್ಗೆ ಮಾತು ಬೇಡ : ಮದುವೆಯಾದ್ಮೇಲೆ ಸಂಗಾತಿ ನಿಮ್ಮ ಸರ್ವಸ್ವ ಎಂಬುದು ನೆನಪಿರಲಿ. ಮಾಜಿಗಳನ್ನು ಮರೆತುಬಿಡಿ. ಎಂದೂ ಸಂಗಾತಿ ಮುಂದೆ ಮಾಜಿ ಸಂಗಾತಿಗಳ ಬಗ್ಗೆ ಮಾತನಾಡಬೇಡಿ. ಸಂಗಾತಿ ತುಲನೆಯಂತೂ ಬೇಡವೇ ಬೇಡ.
ಜಂಭ ಬೇಡ : ಸಂಗಾತಿ ಜೊತೆ ಜೀವನವನ್ನು ಕಳೆಯಬೇಕು ಎಂಬುದು ನೆನಪಿರಲಿ. ನಿನಗಿಂತ ನಾನು ಶ್ರೇಷ್ಠ ಎಂಬ ಜಂಭ ಬೇಡ.
ಸ್ನೇಹಿತರ ಬಗ್ಗೆ ಮಾತು ಬೇಡ : ಸಂಗಾತಿ ಸ್ನೇಹಿತರು ಹೇಗೆ ಎಂಬುದು ನಿಮಗೆ ಸರಿಯಾಗಿ ತಿಳಿದಿರುವುದಿಲ್ಲ. ಹಾಗೆ ಸಂಗಾತಿ, ಸ್ನೇಹಿತರಿಗೆ ಯಾವ ಸ್ಥಾನ ನೀಡಿದ್ದಾರೆಂಬುದು ಗೊತ್ತಿರುವುದಿಲ್ಲ. ಹಾಗಾಗಿ ಸಂಗಾತಿ ಸ್ನೇಹಿತರನ್ನು ಅವಮಾನಿಸುವ ಕೆಲಸಕ್ಕೆ ಹೋಗಬೇಡಿ. ಇದು ಸಂಗಾತಿಯ ಬೇಸರಕ್ಕೆ ಕಾರಣವಾಗಬಹುದು.
ಸಂಬಂಧಿಕರ ಬಗ್ಗೆ ತಮಾಷೆ ಬೇಡ : ಸಂಬಂಧಿಕರ ಬಗ್ಗೆ ಉಡಾಫೆ ಮಾತುಗಳು ಬೇಡ. ಸಂಬಂಧಿಕರ ಬಗ್ಗೆ ತಮಾಷೆ ಮಾಡಿದ ವೇಳೆ ಸಂಗಾತಿ ಯಾವುದೇ ಪ್ರತಿಕ್ರಿಯೆ ನೀಡದೆ ಇರಬಹುದು. ಆದ್ರೆ ಮನಸ್ಸು ನೊಂದುಕೊಂಡಿರುತ್ತದೆ ಎಂಬುದು ನೆನಪಿರಲಿ.