ಮದುವೆ ಎರಡು ಮನಸ್ಸುಗಳ ಜೊತೆ ಎರಡು ಕುಟುಂಬವನ್ನು ಬೆಸೆಯುತ್ತದೆ. ಮದುವೆ ನಂತ್ರ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಬದಲಾವಣೆಯಾಗುತ್ತದೆ. ಮದುವೆಗೆ ಧಾರ್ಮಿಕ, ನಂಬಿಕೆಗಳ ಜೊತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸುತ್ತಮುತ್ತಲಿರುವ ವಸ್ತುಗಳು ನಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆ ತರುತ್ತವೆ. ಅದ್ರಲ್ಲೂ ದಂಪತಿ ಮೇಲೆ ಅವರು ಮಲಗುವ ಹಾಸಿಗೆ ಪ್ರಭಾವ ಬೀರುತ್ತದೆ. ಮದುವೆಗೆ ಮುನ್ನ ಹಾಸಿಗೆ ಖರೀದಿ ಮಾಡುವ ಮೊದಲು ವಾಸ್ತು ಶಾಸ್ತ್ರದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ವಾಸ್ತು ಶಾಸ್ತ್ರದಂತ ಹಾಸಿಗೆ ಖರೀದಿ ಮಾಡಿದ್ರೆ ಎಂದೂ ದಾಂಪತ್ಯದಲ್ಲಿ ಬಿರುಕು ಮೂಡುವುದಿಲ್ಲವೆಂದು ನಂಬಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಕಬ್ಬಿಣದ ಮಂಚದ ಮೇಲೆ ಎಂದೂ ಮಲಗಬಾರದು. ಇದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮರದ ಮಂಚ ವಾಸ್ತು ಪ್ರಕಾರ ಒಳ್ಳೆಯದು. ಹಾಸಿಗೆ ಮೇಲೆ ಅಥವಾ ಅಡಿ ಭಾಗದಲ್ಲಿ ಸೌಂದರ್ಯ ಹೆಚ್ಚಿಸಲು ಗ್ಲಾಸನ್ನು ಬಳಸಿದ್ದರೆ ತಕ್ಷಣ ಅದನ್ನು ತೆಗೆದು ಹಾಕಿ. ಇದು ವಿಭಿನ್ನ ಶಕ್ತಿಯನ್ನು ತನ್ನತ್ತ ಸೆಳೆಯುತ್ತದೆ. ಇದ್ರಿಂದ ದೈಹಿಕ ತೊಂದರೆ ಜೊತೆ ನಿದ್ರೆ ಸಮಸ್ಯೆ ಕಾಡುತ್ತದೆ.
ತ್ರಿಕೋನವಿರುವ ಹಾಸಿಗೆಯನ್ನು ಮರೆತೂ ಖರೀದಿ ಮಾಡಬೇಡಿ. ಎರಡು ಬೆಡ್ ಒಟ್ಟುಗೂಡಿಸಿ ದಂಪತಿ ಮಲಗಬಾರದು. ಒಂದೇ ಬೆಡ್ ಮೇಲೆ ಮಲಗಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಪ್ರಕಾರ ಪತಿ-ಪತ್ನಿ ತಲೆ ದಿಂಬಿನ ಬಣ್ಣ ಕೂಡ ಒಂದೇ ಆಗಿರಬೇಕಂತೆ.