ಮದುವೆ ನಂತ್ರ ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಬದಲಾವಣೆಗಳಾಗುತ್ತವೆ. ಪುರುಷರ ಜವಾವ್ದಾರಿ ಹೆಚ್ಚಾಗುತ್ತದೆ. ಖರ್ಚು ಜಾಸ್ತಿಯಾಗುತ್ತೆ. ಮದುವೆಯಾದ ಪುರುಷನಿಗೆ ಸುತ್ತಮುತ್ತಲಿನ ಜನರು ಅನೇಕ ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆಗಳಿಗೆ ಉತ್ತರಿಸುವ ಮನಸ್ಸು ಆತನಿಗಿರುವುದಿಲ್ಲ. ಈ ಪ್ರಶ್ನೆಗಳು ಆತನ ತಲೆನೋವಿಗೆ ಕಾರಣವಾಗುತ್ತವೆ.
ಮದುವೆಯಾದ ಕೆಲವೇ ದಿನಗಳಲ್ಲಿ ಸ್ನೇಹಿತರು, ಕುಟುಂಸ್ಥರು, ಸಂಬಂಧಿಕರು ಗುಡ್ ನ್ಯೂಸ್ ಯಾವಾಗ ಕೊಡ್ತೀಯಾ ಎಂದು ಆಗಾಗ ಕೇಳ್ತಿರುತ್ತಾರೆ. ಇದು ಪುರುಷರಿಗೆ ಕಿರಿಕಿರಿಯುಂಟು ಮಾಡುತ್ತದೆ.
ಮದುವೆ ನಂತ್ರ ಸ್ನೇಹಿತರು ಕೇಳುವ ಕೆಲವು ಪ್ರಶ್ನೆಗಳು ಆತನಿಗೆ ಇಷ್ಟವಾಗುವುದಿಲ್ಲ. ಮದುವೆ ನಂತ್ರ ಮನೆ-ನೌಕರಿಯನ್ನು ಹೇಗೆ ಸಂಭಾಳಿಸುತ್ತೀಯಾ ಎಂಬ ಪ್ರಶ್ನೆ ಆತನಿಗೆ ಸರಿಯೆನ್ನಿಸುವುದಿಲ್ಲ.
ಮದುವೆಯಾದ್ಮೇಲೆ ಇಷ್ಟವಿರಲಿ ಬಿಡಲಿ ಕೆಲವೊಂದು ಸಮಾರಂಭಗಳಿಗೆ ಹೋಗಬೇಕು. ಅದ್ರಲ್ಲೂ ಪತ್ನಿ ಕಡೆಯ ಸಮಾರಂಭಗಳಿಗೆ ಅವಶ್ಯಕವಾಗಿ ಹೋಗಬೇಕು.
ಮದುವೆ ನಂತ್ರ ಕುಟುಂಬಸ್ಥರು, ಸಂಬಂಧಿಕರು ಅದು ಮಾಡು, ಇದು ಬೇಡ, ಹೀಗೆ ಅನೇಕ ಸಲಹೆಗಳನ್ನು ನೀಡುತ್ತಿರುತ್ತಾರೆ. ಇದು ಆತನಿಗೆ ಸರಿಯೆನ್ನಿಸುವುದಿಲ್ಲ.
ಮದುವೆ ನಂತ್ರ ಪತ್ನಿ ಜೊತೆ ಆಕೆ ಸಹೋದರಿ ಬಗ್ಗೆಯೂ ಜವಾಬ್ದಾರಿ ಹೊರಬೇಕು. ನಾದಿನಿ ಇದ್ದಾಳೆ ಎಂದು ಅನೇಕರು ಪ್ರಶ್ನೆ ಕೇಳಲು ಶುರು ಮಾಡ್ತಾರೆ.
ಅನೇಕರಿಗೆ ಮದುವೆ ಬೋರ್ ಆಗಲು ಜವಾಬ್ದಾರಿ ಕಾರಣವಾಗುತ್ತದೆ. ಬೇಗ ಮನೆಗೆ ಬರಬೇಕು, ಪತ್ನಿ ಇಷ್ಟಗಳ ಬಗ್ಗೆ ಗಮನ ನೀಡಬೇಕು. ಆಕೆ ಜೊತೆ ಶಾಪಿಂಗ್ ಹೋಗಬೇಕು. ಸ್ನೇಹಿತರ ಜೊತೆ ಪಾರ್ಟಿಗೆ ಹೋಗುವಂತಿಲ್ಲ. ಈ ಸಣ್ಣ ವಿಷ್ಯಗಳು ಅವ್ರನ್ನು ದೊಡ್ಡದಾಗಿ ಕಾಡಲು ಶುರುಮಾಡುತ್ತವೆ.