ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ ಕಾರಣಕ್ಕೆ ಕಾಸ್ಮೆಟಿಕ್ಸ್ ಮೊರೆ ಹೋಗ್ತಾರೆ.
ಕಾಸ್ಮೆಟಿಕ್ ಗಳು ಕ್ಷಣಿಕ ಸೌಂದರ್ಯವರ್ಧಕಗಳು. ಅದರ ಬದಲು ಕೆಲ ಹಣ್ಣು, ತರಕಾರಿಗಳ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ. ಇವು ಸೌಂದರ್ಯ ವೃದ್ಧಿಸುವುದಲ್ಲದೇ ನಿಮ್ಮ ಆರೋಗ್ಯವನ್ನೂ ಸುಧಾರಿಸುತ್ತವೆ.
ಕ್ಯಾರೆಟ್ ಜ್ಯೂಸ್ : ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ನೀವು ಬಯಸಿದ್ದರೆ. ಈಗಲೇ ಕ್ಯಾರೆಟ್ ಜ್ಯೂಸ್ ಕುಡಿಯಲು ಆರಂಭಿಸಿ. ಕ್ಯಾರೆಟ್ ನಲ್ಲಿ ವಿಟಮಿನ್ ಎ ಇರುತ್ತದೆ. ಅದು ಚರ್ಮಕ್ಕೆ ತುಂಬಾ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಇದು ಸಹಕಾರಿ.
ಪಾಲಕ್ ರಸ : ಬೆಳಿಗ್ಗೆ ಕಾಫಿ ಕುಡಿಯುವ ಬದಲು ಪಾಲಕ್ ರಸ ಸೇವಿಸಿ. ಚರ್ಮದ ಮೇಲಿರುವ ಕಲೆಗಳನ್ನು ಹೋಗಲಾಡಿಸಿ, ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ. ಸುಕ್ಕು ಕಡಿಮೆಯಾಗಿ ನೀವು ಮತ್ತಷ್ಟು ಚಿಕ್ಕವರಾಗಿ ಕಾಣ್ತೀರಾ.
ಟೊಮೋಟೋ ಜ್ಯೂಸ್ : ಇದರಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ ಮೊಡವೆ ಹಾಗೂ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ಸೌತೆಕಾಯಿ ರಸ : ದೇಹದಲ್ಲಿರುವ ವಿಷ ಪದಾರ್ಥಗಳನ್ನು ತೆಗೆದು ಹಾಕಲು ಇದು ಸಹಕಾರಿ.
ಎಲೆಕೋಸಿನ ರಸ : ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದರಲ್ಲಿ ಬೀಟಾ-ಕ್ಯಾರೋಟಿನ್ ಕೂಡ ಇರುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಮೃದು ಹಾಗೂ ಕೋಮಲ ಚರ್ಮವನ್ನು ನಾವು ಪಡೆಯಬಹುದಾಗಿದೆ.