ವಿವಾಹ ಸಂಪ್ರದಾಯಗಳು ವಿಚಿತ್ರ ಮತ್ತು ವಿಭಿನ್ನವಾಗಿರುತ್ತವೆ. ಆದರೆ ಬಹುತೇಕ ಎಲ್ಲಾ ಕಡೆಗಳಲ್ಲಿ ಇವನ್ನೆಲ್ಲ ತಪ್ಪದೇ ಪಾಲಿಸುತ್ತಾರೆ. ಇದಕ್ಕೆಲ್ಲ ಅವರದ್ದೇ ಆದ ತರ್ಕವಿದೆ. ಮದುವೆಯ ನಂತರ ವಧು-ವರರ ಮೊದಲ ರಾತ್ರಿ ಆಯೋಜನೆ ಮಾಡುವುದು ಸಾಮಾನ್ಯ.
ಆದರೆ ಮೊದಲ ರಾತ್ರಿ ವಧು-ವರನ ಜೊತೆಗೆ ವಧುವಿನ ತಾಯಿ ಕೂಡ ಮಲಗುವ ವಿಚಿತ್ರ ಆಚರಣೆಯೊಂದಿದೆ. ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಅಂತಹ ಆಚರಣೆ ಇದೆ.
ಇಲ್ಲಿನ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಮದುವೆಯ ನಂತರ ವಧುವಿನ ತಾಯಿ ಕೂಡ ದಂಪತಿಗಳೊಂದಿಗೆ ಫಸ್ಟ್ ನೈಟ್‌ನಲ್ಲಿ ಮಲಗುತ್ತಾಳೆ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ಅಲ್ಲಿನ ನಿವಾಸಿಗಳು ತಪ್ಪದೇ ಪಾಲಿಸುತ್ತಾರೆ. ವಧು-ವರರು ಒಬ್ಬರಿಗೊಬ್ಬರು ಹೊಸಬರು. ಹಾಗಾಗಿ ಅವರಿಗೆ ಸಲಹೆ ನೀಡಲು ಮೊದಲ ರಾತ್ರಿ ತಾಯಿ ಅವರೊಂದಿಗೆ ಇರುತ್ತಾರೆ ಎಂಬುದು ಜನರ ವಾದ.
ಸಂತೋಷದ ಜೀವನವನ್ನು ಹೇಗೆ ನಡೆಸಬೇಕು? ಇದಕ್ಕಾಗಿ ಏನು ಮಾಡಬೇಕು ಎಂಬುದನ್ನೆಲ್ಲ ತಾಯಿ ನವದಂಪತಿಗೆ ಹೇಳಿಕೊಡುತ್ತಾಳಂತೆ. ಮರುದಿನ ತಾಯಿ ವಧು – ವರನ ಮೊದಲ ರಾತ್ರಿ ಹೇಗಿತ್ತು? ಅವರು ಸಂತೋಷವಾಗಿದ್ದರೋ ಇಲ್ಲವೋ ಎಂಬುದನ್ನು ಇತರ ಕುಟುಂಬ ಸದಸ್ಯರಿಗೆ ಹೇಳುತ್ತಾಳೆ. ಚೀನಾದ ಕೆಲವು ಪ್ರದೇಶಗಳಲ್ಲಿ ಕೂಡ ಇದೇ ರೀತಿಯ ಸಂಪ್ರದಾಯವಿದೆಯಂತೆ. ಇಲ್ಲಿ ವಧು ಮತ್ತು ಆಕೆಯ ಕುಟುಂಬದವರು ಮದುವೆಗೆ ಮುನ್ನ ವರನೊಂದಿಗೆ ಸಮಯ ಕಳೆಯುತ್ತಾರೆ.