ಕಳೆದ ಹಲವಾರು ದಶಕಗಳಿಂದ ಗೂಗಲ್ ವಿಶ್ವದ ಅತಿದೊಡ್ಡ ಸರ್ಚ್ ಇಂಜಿನ್ ಆಗಿದೆ. ನಮ್ಮಲ್ಲಿರುವ ಬಹುತೇಕ ಎಲ್ಲಾ ಪ್ರಶ್ನೆಗಳು, ಕುತೂಹಲಗಳಿಗೆ ಗೂಗಲ್ ಬಳಿ ಉತ್ತರವಿದೆ ಎನ್ನೋದು ಬಳಕೆದಾರರ ನಂಬಿಕೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು Google ಸಹಾಯವನ್ನು ತೆಗೆದುಕೊಳ್ಳುತ್ತಾರೆ.
ಇತ್ತೀಚಿಗೆ ನಡೆದ ಸಮೀಕ್ಷೆಯೊಂದರಲ್ಲಿ ಮದುವೆಯ ನಂತರ ಹೆಚ್ಚಿನ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಫಲಿತಾಂಶ ನೋಡಿದ್ರೆ ನಿಮಗೂ ತಮಾಷೆ ಎನಿಸಬಹುದು. ಗೂಗಲ್‌ನ ಅಂಕಿಅಂಶಗಳ ಪ್ರಕಾರ, ವಿವಾಹಿತ ಮಹಿಳೆಯರು ತಮ್ಮ ಪತಿ ಏನನ್ನು ಇಷ್ಟಪಡುತ್ತಾರೆ ಎಂಬುದನ್ನು ಕಂಡು ಹಿಡಿಯುವುದು ಹೇಗೆ ಅನ್ನೋದನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ.
ಮದುವೆಯಾದ ನಂತರ ಜಗತ್ತಿನ ಪ್ರತಿಯೊಬ್ಬ ಹೆಣ್ಣಿಗೂ ಕಾಡುವ ಪ್ರಶ್ನೆ ಪತಿಗೆ ಏನು ಇಷ್ಟ ಎಂಬುದು. ಗಂಡಂದಿರ ಆಯ್ಕೆ ಯಾವುದು? ಅವರು ಇಷ್ಟಪಡುವ ಮತ್ತು ಇಷ್ಟಪಡದಿರುವ ಸಂಗತಿಗಳು ಏನೇನು ಎಂಬುದನ್ನು ತಿಳಿದುಕೊಳ್ಳಲು ನವ ವಧುಗಳು ಪ್ರಯತ್ನಿಸ್ತಾರೆ. ಈ ಪ್ರಶ್ನೆಯನ್ನು Google ನಲ್ಲಿ ಹಾಕಿ ಅತಿ ಹೆಚ್ಚು ಬಾರಿ ಹುಡುಕಲಾಗಿದೆ.
ಇದಲ್ಲದೆ, ಗಂಡನ ಹೃದಯವನ್ನು ಹೇಗೆ ಗೆಲ್ಲಬೇಕು? ಅವರನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ. ಕೆಲವೊಮ್ಮೆ ಮಹಿಳೆಯರು ಕೂಡ ಗೂಗಲ್ ಗೆ ವಿಚಿತ್ರ ಪ್ರಶ್ನೆ ಕೇಳುತ್ತಾರೆ. ಗಂಡ ನಾವು ಹೇಳಿದಂತೆ ಕೇಳಿಕೊಂಡಿರುವಂತೆ ಮಾಡಲು ಏನು ಮಾಡಬೇಕು ಎಂಬುದನ್ನು ಕೂಡ ಗೂಗಲ್‌ನಲ್ಲಿ ಮಹಿಳೆಯರು ಹುಡುಕಿದ್ದಾರೆ. ಇದಲ್ಲದೆ ಮದುವೆಯ ನಂತರ ಮಕ್ಕಳನ್ನು ಹೊಂದಲು ಸರಿಯಾದ ಸಮಯ ಯಾವುದು ಎಂಬುದನ್ನು ಕೂಡ ಅತಿ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆ.
ಯಾಕಂದ್ರೆ ಸಾಮಾನ್ಯವಾಗಿ ಮಹಿಳೆಯರಿಗೆ ಈ ಟೆನ್ಷನ್ ಇದ್ದೇ ಇರುತ್ತದೆ. ಮಹಿಳೆಯರು ಮದುವೆಯ ನಂತರ ತಮ್ಮ ಹೊಸ ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು? ಆ ಕುಟುಂಬದ ಭಾಗವಾಗುವುದು ಹೇಗೆ? ಅತ್ತೆ-ಮಾವಂದಿರ ಹೃದಯ ಗೆಲ್ಲಲು ಏನು ಮಾಡಬೇಕು? ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದು ಹೇಗೆ? ಮದುವೆಯ ನಂತರ ಸ್ವಂತ ವ್ಯವಹಾರವನ್ನು ಹೇಗೆ ನಡೆಸಬೇಕು? ಕುಟುಂಬ ವ್ಯವಹಾರವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನೆಲ್ಲ ಅತಿ ಹೆಚ್ಚು ಬಾರಿ ಗೂಗಲ್‌ನಲ್ಲಿಸ ಸರ್ಚ್ ಮಾಡಲಾಗಿದೆ.