ಪ್ರೀತಿಸಿ ಮದುವೆಯಾದ ಯುವತಿ ಅನ್ಯ ಧರ್ಮಕ್ಕೆ ಸೇರಿದವಳೆಂಬ ಸಂಗತಿ 12 ವರ್ಷಗಳ ಬಳಿಕ ಬಹಿರಂಗವಾಗಿದ್ದು, ಇದೀಗ ಪತಿ ಈ ಕುರಿತಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.
ಅಯೋಧ್ಯೆ ನಿವಾಸಿ ಜಗ್ಬೀರ್ ಕೋರಿ ಎಂಬಾತ 12 ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ರೈಲು ನಿಲ್ದಾಣದಲ್ಲಿ ಭೇಟಿಯಾಗಿದ್ದು ಈ ಸಂದರ್ಭದಲ್ಲಿ ಆಕೆ ತಾನು ಅಸಹಾಯಕಳಾಗಿದ್ದೇನೆ ಎಂದಿದ್ದಳು.
ಆಕೆಯನ್ನು ಮನೆಗೆ ಕರೆದುಕೊಂಡ ಬಂದ ಜಗ್ಬೀರ್ ಬಳಿಕ ಪೋಷಕರ ಸಮ್ಮತಿಯೊಂದಿಗೆ ಮದುವೆಯಾಗಿದ್ದು, ಆಕೆ ಪೂಜಾ ಎಂದು ಹೇಳಿಕೊಂಡಿದ್ದಳು. ಆದರೆ ಆಕೆ ಇಸ್ಲಾಂ ಧರ್ಮಕ್ಕೆ ಸೇರಿದವಳು ಹಾಗೂ ಆಕೆಯ ಹೆಸರು ಹಸೀನಾ ಬಾನು ಎಂಬ ಸಂಗತಿ ಈಗ ತಿಳಿದು ಬಂದಿದೆಯಂತೆ. ಅಲ್ಲದೆ ತನ್ನನ್ನು ಹಾಗೂ ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸುತ್ತಿದ್ದಾಳೆ ಎಂದು ಜಗ್ಬೀರ್ ದೂರಿನಲ್ಲಿ ತಿಳಿಸಿದ್ದಾನೆ.
ಆಕೆಯ ಪೋಷಕರು ಸಹ ಮತಾಂತರಗೊಳ್ಳುವಂತೆ ಬೆದರಿಕೆ ಒಡ್ಡುತ್ತಿದ್ದು, ಸ್ಥಳೀಯ ರೌಡಿ ನಾಸೀರ್ ಎಂಬಾತ ಅವರಿಗೆ ಬೆಂಬಲವಾಗಿ ನಿಂತಿದ್ದಾನೆ ಎಂದು ಜಗ್ಬೀರ್ ಪೊಲೀಸರಿಗೆ ತಿಳಿಸಿದ್ದು, ನಾಸೀರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.