ಮದುವೆಯಾಗಿ ಈಗಷ್ಟೇ ಪತಿಗೃಹಕ್ಕೆ ಕಾಲಿಟ್ಟಿದ್ದೀರಾ? ಪತಿ ಮನೆಯಲ್ಲಿ ಹೇಗೆ ಹೊಂದಿಕೊಳ್ಳುವುದು ಎಂಬ ಯೋಚನೆ ಕಾಡುತ್ತಿದೆಯೇ. ನಿಮಗಾಗಿಯೇ ಕೆಲವು ಟಿಪ್ಸ್ ಗಳು ಇಲ್ಲಿವೆ.
ನೀವು ಸೇರಿದ ಮನೆಯ ರೀತಿ ರಿವಾಜುಗಳನ್ನು ತಿಳಿಯಿರಿ. ಮನೆಮಂದಿಯೊಂದಿಗೆ ಸಹಜವಾಗಿ ವ್ಯವಹರಿಸಿ. ಪ್ರತಿಯೊಬ್ಬರಲ್ಲೂ ಮಾತನಾಡಿ. ನಿಮ್ಮಪತಿಯ ಬಳಿ ಕೇಳಿ ಮನೆ ಮಂದಿಯ ಬಗ್ಗೆ ತಿಳಿದುಕೊಳ್ಳಿ.
ಪತಿಯ ಖರ್ಚು ವೆಚ್ಚಗಳನ್ನು ತಿಳಿದುಕೊಳ್ಳಿ. ನಿಮ್ಮ ಕಮಿಟ್ ಮೆಂಟ್ ಗಳ ಬಗ್ಗೆಯೂ ತಿಳಿಸಿ. ಇಬ್ಬರೂ ಜೊತೆಯಾಗಿ ಬಜೆಟ್ ಪ್ಲಾನ್ ಮಾಡಿ. ಮನಸ್ತಾಪಕ್ಕೆ ಎಡೆ ಮಾಡಿ ಕೊಡದಂತ ಯೋಜನೆ ರೂಪಿಸಿ.
ಅಡುಗೆ ಮಾಡಲು ನಿಧಾನವಾಗಿ ಕಲಿತರೂ ಪರವಾಗಿಲ್ಲ. ಮನೆಮಂದಿಯ ಮನಸ್ಸು ಗೆಲ್ಲಿ. ನೀವು ಅವರಿಗಾಗಿ ಅಡ್ಜೆಸ್ಟ್ ಆಗುವುದು ಮುಖ್ಯವಲ್ಲ, ನಿಮ್ಮ ಗುಣ ಎಂಥದ್ದು ಎಂಬುದನ್ನು ಅವರಿಗೆ ತಿಳಿಸಿ. ಸಂತಸದಿಂದ ಮನೆಮಂದಿಯೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ನಿಮ್ಮ ಬಾಳು ಸೊಗಸಾಗುವುದು ನಿಸ್ಸಂಶಯ.