ಹೆಣ್ಣು ಮಕ್ಕಳನ್ನು ತಂದೆತಾಯಿ ತುಂಬಾ ಪ್ರೀತಿಯಿಂದ ಸಾಕುತ್ತಾರೆ.
ಹೆಣ್ಣುಮಕ್ಕಳು ತಂದೆತಾಯಿಯ ಪಾಲಿನ ಅದೃಷ್ಟ ಲಕ್ಷ್ಮಿ ಎನ್ನುತ್ತಾರೆ. ಆದರೆ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಅವರನ್ನು ಗಂಡನ ಮನೆಗೆ ಕಳುಹಿಸಲೇಬೇಕಾಗುತ್ತದೆ. ಆದರೆ ಆ ವೇಳೆ ಅವರಿಗೆ ಈ ವಸ್ತುವನ್ನು ನೀಡಬೇಡಿ.
ಗಣಪತಿ ವಿಘ್ನನಿವಾರಕ, ಸಂಕಷ್ಟ ಪರಿಹರಿಸುವವನು ಎಂದು ಹೇಳುತ್ತಾರೆ. ಹಾಗಾಗಿ ತಮ್ಮ ಮಗಳು ಹೋದ ಕಡೆ ವಿಘ್ನಗಳನ್ನು ಎದುರಾಗದೆ ಆಕೆ ಸುಖವಾಗಿ ಇರಲಿ ಎಂದು ಕೆಲವು ತಂದೆತಾಯಿ ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಆದರೆ ಇದು ತಪ್ಪು.
ತಂದೆತಾಯಿ ಮಗಳಿಗೆ ಗಣಪತಿಯನ್ನು ಉಡುಗೊರೆಯಾಗಿ ನೀಡಿದರೆ ಅವರಿಗೆ ಧನ ಹಾನಿಯಾಗುತ್ತದೆ. ಯಾಕೆಂದರೆ ಹೆಣ್ಣು ಮಕ್ಕಳು ಲಕ್ಷ್ಮಿ ದೇವಿಯ ಸ್ವರೂಪ. ಹಾಗಾಗಿ ಗಣಪತಿ ಮತ್ತು ಲಕ್ಷ್ಮಿ ಎಲ್ಲಿ ಜೊತೆಯಾಗಿ ಇರುತ್ತಾರೋ ಅಲ್ಲಿ ಧನಸಂಪತ್ತು ನೆಲೆಸಿರುತ್ತದೆ. ಹಾಗಾಗಿ ಅವರಿಬ್ಬರನ್ನು ಒಟ್ಟಿಗೆ ಮನೆಯಿಂದ ಹೊರಹಾಕುವುದು ಒಳ್ಳೆಯದಲ್ಲ ಎನ್ನುತ್ತಾರೆ.