alex Certify ಮದುವೆಯಾದ ಖುಷಿಗೆ ಗಾಳಿಯಲ್ಲಿ ಗುಂಡು ಹಾರಿಸಿದ ವಧು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಖುಷಿಗೆ ಗಾಳಿಯಲ್ಲಿ ಗುಂಡು ಹಾರಿಸಿದ ವಧು..!

ವಿವಾಹೋತ್ಸವ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಂಭ್ರಮದ ಕ್ಷಣ. ಕೆಲವರು ಈ ಸಂಭ್ರಮವನ್ನು ಬಹಳ ಅದ್ಧೂರಿಯಾಗಿ ಏರ್ಪಡಿಸುತ್ತಾರೆ. ಉತ್ತರ ಭಾರತದದಲ್ಲಿ ವಿವಾಹ ಸಂಭ್ರಮದ ವೇಳೆ ಗುಂಡು ಹಾರಿಸುವ ಅಭ್ಯಾಸವು ಇನ್ನೂ ಸಾಮಾನ್ಯವಾಗಿದೆ.

ಅಂತಹ ಗುಂಡಿನ ಪ್ರದರ್ಶನ ಕಾನೂನುಬಾಹಿರವಾಗಿದ್ದರೂ ಮತ್ತು ಆಗಾಗ್ಗೆ ಆಕಸ್ಮಿಕ ಸಾವುಗಳಿಗೆ ಕಾರಣವಾಗಿದ್ದರೂ, ಇನ್ನೂ ಕೂಡ ಕೆಲವರು ಈ ಪದ್ಧತಿಯನ್ನು ಮುಂದುವರೆಸುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಧುವೊಬ್ಬಳು ತನ್ನ ಮದುವೆ ಸಂಭ್ರಮದ ವೇಳೆ ಗುಂಡು ಹಾರಿಸಿದ್ದಾಳೆ. ಕೆಂಪು ಮತ್ತು ಮೆಜೆಂಟಾ ಲೆಹೆಂಗಾವನ್ನು ಧರಿಸಿರುವ ವಧು, ಮದುವೆಯ ಆಚರಣೆಗಳನ್ನು ಮಾಡಿದ ನಂತರ ತನ್ನ ಮದುವೆಯ ಸ್ಥಳದಲ್ಲಿ ಹೊರಗಡೆ ನಿಂತಿದ್ದಾಳೆ. ಈ ವೇಳೆ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡ ಆಕೆ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ.

ಮುಖದ ಮೇಲೆ ನಗೆ ಸೂಸುತ್ತಾ, ಆತ್ಮವಿಶ್ವಾಸದಿಂದ ವಧು ಫೈರಿಂಗ್ ಮಾಡಿದ್ದಾಳೆ. ನಂತರ ಬಂದೂಕನ್ನು ಬೇರೆಯವರಿಗೆ ಹಸ್ತಾಂತರಿಸಿದ್ದಾಳೆ. ಫೈರಿಂಗ್ ಮಾಡುವಾಗ ಸ್ವಲ್ಪವೂ ಅಳುಕದೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ಕೂಡ ತಿಳಿದಿಲ್ಲ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 67,000ಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...