alex Certify ಮದುವೆಯಾಗೋದಾಗಿ ವಿಧವೆ ನಂಬಿಸಿ ಚಿನ್ನಾಭರಣ ಕದ್ದು ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗೋದಾಗಿ ವಿಧವೆ ನಂಬಿಸಿ ಚಿನ್ನಾಭರಣ ಕದ್ದು ಪರಾರಿ

ಬೆಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ಮಾತು ಇತ್ತೀಚಿನ ಕೆಲವು ಘಟನೆಗಳಿಗೆ ಅನ್ವಯ ಆಗುತ್ತಿದೆ. ಬೆಂಗಳೂರಿನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ಮದುವೆಯಾಗೋದಾಗಿ ನಂಬಿಸಿ ವಿಧವೆ ಮಹಿಳೆಯೊಬ್ಬರಿಗೆ ಮೋಸ ಮಾಡಿದ ಘಟನೆ ನಡೆದಿದೆ.

ಹೌದು, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮಹಿಳೆಯೊಬ್ಬರಿಗೆ ಪ್ರದೀಪ್ ಎಂಬಾತ ಮದುವೆಯಾಗೋದಾಗಿ ನಂಬಿಸಿ ವಂಚಿಸಿದ್ದಾನೆ. ವಿಧವೆಯಾದ ಈಕೆ ಮಗಳೊಂದಿಗೆ ವಾಸವಿದ್ದರಂತೆ. ಪ್ರದೀಪ್ ಎಂಬಾತ ಈಕೆಯ ಸ್ನೇಹ ಮಾಡಿ ಮದುವೆಯಾಗೋದಾಗಿ ಹೇಳಿದ್ದಾನೆ. ಅಷ್ಟೆ ಅಲ್ಲ ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದಾನೆ. ನಂಬಿಕೆ ಬರುವವರೆಗೂ ಮನೆಯಲ್ಲಿದ್ದು, ನಂತರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಸುಮಾರು 15 ಲಕ್ಷ ರೂ.  ಮೌಲ್ಯದ ಚಿನ್ನಾಭರಣ ದೋಚಿದ್ದಾನೆ. ಮೊದಲು ಈತ ತನಗೆ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾನೆ. ಆದರೆ ಈಗ ಅವನು ಮದುವೆಯಾಗಿರೋದು ಗೊತ್ತಾಗಿದೆ‌. ಈ ಸಂಬಂಧ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇನ್ನು ಆರೋಪಿಯನ್ನು ಸೆರೆ ಹಿಡಿದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ‌.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...