ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜತೆ ವಾಸವಾಗಿದ್ದ ಯುವಕ ಮೋಸ ಮಾಡಿ, ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇವೆಂಟ್ ಮ್ಯಾನೇಜ್ ಮೆಂಟ್ ಮಾಡಿಕೊಂಡಿದ್ದ ಯುವತಿಗೆ ವರ್ಷದ ಹಿಂದೆ ಪರಿಚಯವಾಗಿದ್ದ ಅರುಣ್ ಎಂಬ ಯುವಕ ಪ್ರೀತಿ-ಪ್ರೇಮದ ಹೆಸರಲ್ಲಿ ಮದುವೆಯಾಗುವುದಾಗಿ ನಂಬಿಸಿ ಲಿವಿನ್ ರಿಲೇಶನ್ ಶಿಪ್ ನಲ್ಲಿದ್ದು, ಯುವತಿ ಗರ್ಭಿಣಿಯಾಗುತ್ತಿದ್ದಂತೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
5 ತಿಂಗಳಿಂದ ಲಿವಿನ್ ರಿಲೇಶನ್ ಶಿಪ್ ನಲ್ಲಿದ್ದು, ಯುವತಿ ತಾನು ಗರ್ಭಿಣಿ ಎಂಬುದನ್ನು ತಿಳಿಸುತ್ತಿದ್ದಂತೆ ಆಕೆ ಬಳಿ ಇದ್ದ 4 ಲಕ್ಷ ರೂಪಾಯಿ ಹಣವನ್ನು ಎಗರಿಸಿ ಯುವಕ ಎಸ್ಕೇಪ್ ಆಗಿದ್ದಾನೆ.
ಬಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಇದೀಗ ಆರೋಪಿ ಅರುಣ್ ನನ್ನು ಪೊಲೀಸರು ಬಂಧಿಸಿದ್ದಾರೆ.