ಪ್ರಚೋದನಕಾರಿ ಸಿರಿಯನ್ ಹಾಡಿಗೆ ವಧು ನೃತ್ಯ ಮಾಡಿದ್ದಕ್ಕೆ ಕೋಪಗೊಂಡ ಇರಾಕ್ ವರನೊಬ್ಬ ಆಕೆಗೆ ವಿಚ್ಚೇದನವನ್ನೇ ನೀಡಿದ್ದಾನೆ. ಇದನ್ನು ಇರಾಕ್ನಲ್ಲಿ ನಡೆದ ಅತ್ಯಂತ ವೇಗದ ವಿಚ್ಚೇದನ ಎಂದು ಪರಿಗಣಿಸಲಾಗಿದೆ.
ಬಾಗ್ದಾದ್ನ ನಿವಾಸಿಯಾದ ವರನು ಮದುವೆ ಕಾರ್ಯಕ್ರಮದಲ್ಲಿ ನಾನು ಪ್ರಬಲ ಅಥವಾ ನಾನು ನಿನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೇನೆ ಎಂಬ ಅರ್ಥದ ಮೆಸಯ್ತಾರಾ ಹಾಡನ್ನು ಪ್ಲೇ ಮಾಡಿದ್ದರಿಂದ ಕೋಪಗೊಂಡು ವೈವಾಹಿಕ ಸಂಬಂಧ ಮುರಿದುಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಂತಹದ್ದೊಂದು ಹಾಡಿಗೆ ವಧು ನೃತ್ಯ ಮಾಡಿದ್ದರಿಂದ ವರ ಹಾಗೂ ಆತನ ಕುಟುಂಬದ ಭಾವನೆಗೆ ಧಕ್ಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಹಾಡಿನ ವಿಚಾರವಾಗಿ ವಧು – ವರರ ಕುಟುಂಬದ ನಡುವೆ ವಾಗ್ವಾದ ತಾರಕಕ್ಕೇರುತ್ತಿದ್ದಂತೆಯೇ ವರ ತನ್ನ ನಿರ್ಧಾರವನ್ನು ಘೋಷಿಸಿದ್ದಾನೆ ಎನ್ನಲಾಗಿದೆ.
ಈ ರೀತಿ ಹಾಡಿನ ಕಾರಣಕ್ಕೆ ದಂಪತಿ ವಿಚ್ಚೇದನ ಪಡೆದಿದ್ದು ಇದೇ ಮೊದಲೇನಲ್ಲ.
ಕಳೆದ ವರ್ಷ ಜೋರ್ಡಾನ್ನ ವ್ಯಕ್ತಿಯೊಬ್ಬರು ಮದುವೆ ಕಾರ್ಯಕ್ರಮದಲ್ಲಿ ಹಾಡಿನ ಕಾರಣಕ್ಕೆ ತನ್ನ ಪತ್ನಿಗೆ ವಿಚ್ಚೇದನ ನೀಡಬೇಕಾದ ಪ್ರಸಂಗ ಎದುರಾಗಿತ್ತು. ವರ ನಾನು ಪ್ರಬಲನಾಗಿದ್ದೇನೆ. ನನ್ನ ಕಟ್ಟುನಿಟ್ಟಿನ ಸೂಚನೆಯ ಆಳ್ವಿಕೆಯ ಅಡಿಯಲ್ಲಿ ನೀನು ಇರಬೇಕು. ಬೀದಿಯಲ್ಲಿ ಬೇರೆಯವರನ್ನು ನೋಡಿದರೆ ನಾನು ನಿನ್ನನ್ನು ಹುಚ್ಚನಾಗಿಸುತ್ತೇನೆ. ನಾನು ಪ್ರಬಲನಾಗಿದ್ದೇನೆ ಎಂಬರ್ಥದ ಹಾಡು ಇದಾಗಿತ್ತು.