alex Certify ಮದುವೆಗೂ ಮೊದಲೇ 76 ಕೋಟಿ ರೂ. ಮೌಲ್ಯದ ವಜ್ರದುಂಗರ ತೊಡಿಸಿದ ಹಾಲಿವುಡ್‌ ಸ್ಟಾರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೂ ಮೊದಲೇ 76 ಕೋಟಿ ರೂ. ಮೌಲ್ಯದ ವಜ್ರದುಂಗರ ತೊಡಿಸಿದ ಹಾಲಿವುಡ್‌ ಸ್ಟಾರ್…!

ಹಾಲಿವುಡ್ ತಾರಾ ಜೋಡಿ ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. 20 ವರ್ಷಗಳ ನಂತರ ಈ ಜೋಡಿ ಮತ್ತೊಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದೆ.

ಜೆನ್ನಿಫರ್ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ವಿಡಿಯೋ ಮೂಲಕ ಅಭಿಮಾನಿಗಳಿಗೆ ನೀಡಿದ್ದಾರೆ. ಈ ಸಮಯದಲ್ಲಿ ನಟೀಮಣಿ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಸಹ ಪ್ರದರ್ಶಿಸಿದ್ದಾರೆ. ಅದರ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ.

ಬೆನ್‌ ಅಫ್ಲೆಕ್‌, ತಮ್ಮ ಪ್ರಿಯತಮೆಗೆ ತೊಡಿಸಿರುವ ಉಂಗುರ ವಜ್ರದ್ದು. ಈ ಉಂಗುರವನ್ನ 8.5 ಕ್ಯಾರೆಟ್ ನೈಸರ್ಗಿಕ ಗ್ರೀನ್‌ ಡೈಮಂಡ್ ಸೆಂಟರ್ ಕಲ್ಲಿನಿಂದ ಮಾಡಲಾಗಿದೆ. ಈ ಉಂಗುರದ ಅಂದಾಜು ಬೆಲೆ 10 ಮಿಲಿಯನ್‌ ಡಾಲರ್‌ ಗಿಂತಲೂ ಹೆಚ್ಚು. ಅಂದ್ರೆ ಸುಮಾರು 76 ಕೋಟಿ ರೂಪಾಯಿಯಂತೆ.

ಡೈಮಂಡ್‌ ಕಂಪನಿಯ ಸಿಇಓ, ಮೈಕ್ ಫ್ರೈಡ್ ಈ ವಜ್ರದ ಉಂಗುರದ ಬಗ್ಗೆ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಗಾತ್ರದ ಹಸಿರು ವಜ್ರವು ತುಂಬಾ ಅಪರೂಪ. ಈ ಉಂಗುರದ ಬೆಲೆ ಸುಮಾರು 5 ಮಿಲಿಯನ್ ಡಾಲರ್‌ ಇರಬಹುದು ಅಂತಾ ಮೈಕ್‌ ಅಂದುಕೊಂಡಿದ್ದರಂತೆ. ಆದ್ರೆ ಅದರ ಡಬಲ್‌ ಮೌಲ್ಯವನ್ನು ಇದು ಹೊಂದಿದೆ ಅಂತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಜೆನ್ನಿಫರ್‌ ಲೋಫೆಝ್‌ ಗೆ ಹಸಿರು ಬಣ್ಣ ಫೇವರಿಟ್‌ ಅಂತೆ. ಹಸಿರು ತಮ್ಮ ಅದೃಷ್ಟದ ಬಣ್ಣವೆಂದು ಜೆನ್ನಿಫರ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹಾಗಾಗಿಯೇ ಬೆನ್‌ ಅಫ್ಲೆಕ್‌, ಹಸಿರು ಕಲ್ಲಿನ ದುಬಾರಿ ಉಂಗುರವನ್ನು ತೊಡಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...