ಮದುವೆಯಾಗಲು ಸಿದ್ಧರಾಗಿರುವ ಹುಡುಗ್ರು ಮದುವೆ ನಂತ್ರ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ಮೊದಲೇ ಆಲೋಚನೆ ಮಾಡಿರಬೇಕು. ದಾಂಪತ್ಯ ಜೀವನವನ್ನು ಸುಧಾರಿಸುವ ಕೆಲ ಅಭ್ಯಾಸಗಳನ್ನು ಕಲಿತಿರಬೇಕು.ಮದುವೆಗೆ ಮೊದಲು ಯಾವ ವಿಷಯಗಳನ್ನು ಕಲಿಯಬೇಕು ಎಂಬುದರ ವಿವರ ಇಲ್ಲಿದೆ.
ಮದುವೆಗೆ ಮೊದಲು ಅಡುಗೆ ಕಲಿಯಬೇಕು. ಇದರಿಂದ ಎರಡು ಅನುಕೂಲಗಳಿವೆ. ಮೊದಲಿಗೆ ನಿಮ್ಮ ಭಾವಿ ಪತ್ನಿ ಈ ಅಭ್ಯಾಸದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಎರಡನೆಯದಾಗಿ ನಿಮ್ಮ ಹೆಂಡತಿ ಮನೆಯಿಂದ ಹೊರಗೆ ಹೋದಾಗ ತಿನ್ನಲು ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಮದುವೆಗೆ ಮೊದಲು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ. ಏಕೆಂದರೆ ಮದುವೆಯ ನಂತರ ಖರ್ಚು ಒಂದರಿಂದ ಎರಡಾಗುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸದಿದ್ದರೆ ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಮದುವೆಗೂ ಮುನ್ನ ಯಾವುದೇ ಆಲೋಚನೆ ಇಲ್ಲದೆ ಖರ್ಚು ಮಾಡುವವರು ಮದುವೆ ನಂತ್ರ ಆಲೋಚನೆ ಮಾಡಿ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಮದುವೆಗೂ ಮುನ್ನವೇ ಇದನ್ನು ಅಭ್ಯಾಸ ಮಾಡಿಕೊಳ್ಳಿ.
ಪ್ರತಿ ಮಾತಿಗೂ ಶಪಥ ಮಾಡುವ ಪದ್ಧತಿಯಿದ್ದರೆ ತಕ್ಷಣ ಬಿಡಿ. ಮದುವೆ ನಂತ್ರ ಶಪಥ ಮಾಡಿ ಅದನ್ನು ಮರೆತ್ರೆ ಕೆಲಸ ಕೆಟ್ಟಂತೆ. ದಾಂಪತ್ಯದ ಸಮಸ್ಯೆಗೆ ಇದು ಕಾರಣವಾಗುತ್ತದೆ.